ಗೀಸರ್ ಹಳತಾಗಿ ಸ್ಫೋಟಗೊಂಡ ಸುದ್ದಿಗಳನ್ನು ನೋಡುತ್ತಲೇ ಇರುತ್ತೀರಿ. ಇದು ನಮ್ಮ ಮನೆಯಲ್ಲಿ ಆಗಬಾರದು ಎಂದಿಲ್ಲ. ಜಾಗರೂಕರಾಗಿರುವುದು ಮುಖ್ಯ. ನಿಮ್ಮ ಮನೆಯ ಗೀಸರ್ ಬಗ್ಗೆ ನಿಮಗೆ ಮಾಹಿತಿ ಇರುತ್ತದೆ. ಆದರೆ ಬಾಡಿಗೆ ಮನೆಗಳಿಗೆ ಹೋದಾಗ ಅವು ಸರಿಯಾಗಿ ಕೆಲಸ ಮಾಡುತ್ತವೋ ಇಲ್ಲವೋ ಎನ್ನುವುದನ್ನು ಹೀಗೆ ಅರಿಯಿರಿ..
- ನಿಮ್ಮ ಗೀಸರ್ ಎಷ್ಟು ವರ್ಷ ಹಳೆಯದ್ದು ಎಂದು ನಿಮಗೆ ತಿಳಿದಿರುತ್ತದೆ. ಅಂದಾಜು ಮಾಡಿಯಾದರೂ ಇಷ್ಟು ವರ್ಷಗಳಾಗಿವೆ ಎನ್ನುವ ಮಾಹಿತಿ ಇದ್ದೇ ಇರುತ್ತದೆ. ನೋಡಲು ಚೆನ್ನಾಗಿ ಕಾಣುತ್ತಿದೆ ಎಂದ ಮಾತ್ರಕ್ಕೆ ಒಳಗೆ ಎಲ್ಲವೂ ಸರಿಯಿದೆ ಎಂದರ್ಥ ಅಲ್ಲ.
- ಯಾವುದೇ ಗೀಸರ್ ಎಂಟರಿಂದ-ಹತ್ತು ವರ್ಷ ಮಾತ್ರ ಕಾರ್ಯನಿರ್ವಹಿಸುತ್ತದೆ. ಹತ್ತು ವರ್ಷದ ನಂತರ ಗೀಸರ್ ಬದಲಾಯಿಸಲೇಬೇಕಿದೆ. ಮ್ಯಾನುಫ್ಯಾಕ್ಚರ್ ದಿನದಿಂದ ಹತ್ತು ವರ್ಷದ ನಂತರ ಗೀಸರ್ ಬದಲಾಯಿಸಿಬಿಡಿ.
- ಗೀಸರ್ನ ಟ್ಯಾಂಕ್ ತುಕ್ಕು ಹಿಡಿದಿದ್ದರೆ ಇದು ಗೀಸರ್ ಬದಲಿಸಲು ಒಳ್ಳೆಯ ಸಮಯ
- ಗೀಸರ್ನಿಂದ ಶಬ್ದ ಬಂದರೆ ಅಥವಾ ಗೀಸರ್ನಿಂದ ನೀರು ಲೀಕ್ ಆಗುತ್ತಿದೆಯಾ ಗಮನಿಸಿ.
- ನೀರು ಬಿಸಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆಯಾ? ಹಾಗಿದ್ರೆ ಇದನ್ನು ಈಗಲೇ ಬದಲಾಯಿಸಿ.
- ಕಾದ ನೀರು ಸ್ನಾನದ ಮಧ್ಯೆಯೇ ಖಾಲಿಯಾಗುತ್ತಾ? ಎಷ್ಟು ಬಿಸಿ ನೀರು ಎಷ್ಟು ಸಮಯ ಬರುತ್ತದೆ ಗಮನಿಸಿ.