ಹೊಸದಿಗಂತ ವರದಿ ವಿಜಯಪುರ:
ಕಲಬೆರಕೆ ತುಪ್ಪ ಮಾರಾಟ ಜಾಲವನ್ನು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ನಗರದಲ್ಲಿ ಭೇದಿಸಿದ್ದಾರೆ.
ಇಲ್ಲಿನ ಸಾಯಿ ಪಾರ್ಕ್ನ ಬಾಲಾಜಿ ಹಾಲಿನ ಡೈರಿ ಎನ್ನುವ ಮಳಿಗೆ ಮೇಲೆ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿ, 30 ಕೆಜಿ ಕಲಬೆರಕೆ ತುಪ್ಪ ಪತ್ತೆ ಮಾಡಿದ್ದಾರೆ.
ಅಂಗಡಿ ಮಾಲೀಕ ರವಿ ನಿಂಗನಗೌಡ ಬಿರಾದಾರ ಎನ್ನುವ ವ್ಯಕ್ತಿ ಹಾಗೂ ಇತರರು ಕಲಬೆರಕೆ ತುಪ್ಪ ತಯಾರಿಕೆ ಮಾಡುತ್ತಿದ್ದರು. ಈ ಆರೋಪಿಗಳು ಕಲಬೆರಕೆ ತುಪ್ಪದ ಬಾಟಲ್, ಸ್ಟಿಕರ್ ಸೇರಿದಂತೆ ಪ್ಯಾಕಿಂಗ್ ವಸ್ತುಗಳನ್ನು ಹಾಗೂ ಬಿಲ್ ಬುಕ್ ಹೊಂದಿದ್ದರು.
ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.