ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರೀಕ್ಷೆಯಲ್ಲಿ ಪಾಸ್ ಆಗೋಕೆ ಮಕ್ಕಳು ಏನೆಲ್ಲಾ ಸಾಹಸ ಮಾಡ್ತಾರೆ. ಆದರೆ ಓದಿದರೆ ಪರೀಕ್ಷೆ ಪಾಸ್ ಆಗಬಹುದು ಎನ್ನೋ ಸುಲಭದ ವಿಚಾರ ಇವರಿಗೆ ತಿಳಿದಂತಿಲ್ಲ.
ಬಿಹಾರದ ಛಾಪ್ರಾದಲ್ಲಿ ರಸಾಯನಶಾಸ್ತ್ರದ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬ ಭೋಜಪುರಿ ಸಿನಿಮಾದ ಹಾಡನ್ನು ಬರೆದಿದ್ದಾನೆ. ವ್ಯಾಲುಯೇಷನ್ ವೇಳೆ ಇದನ್ನು ಕಂಡ ಶಿಕ್ಷಕರಿಗೆ ಭಾರೀ ಕೋಪ ಬಂದಿದ್ದು, ಫೋನ್ ಮಾಡಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಸಾಮಾನ್ಯ ದುಂಡು ಅಕ್ಷರಗಳಲ್ಲಿ ಬರೆದರೆ ಏನು ಬರೆದಿದ್ದೇವೆ ಎಂಬುದರ ಬಗ್ಗೆ ಗಮನ ಇರವುದಿಲ್ಲ ಎನ್ನುವುದು ಕೆಲ ವಿದ್ಯಾರ್ಥಿಗಳ ನಂಬಿಕೆಯಾಗಿದೆ. ಆದರೆ ಇದು ನಿಜವಲ್ಲ ಎಂದು ಶಿಕ್ಷಕ ಸಾಬೀತು ಮಾಡಿದ್ದಾರೆ. ಉತ್ತರದ ಜಾಗದಲ್ಲಿ ಉತ್ತರ ಬಿಟ್ಟು ಬೇರೇನು ಬರೆದರೂ ಅದಕ್ಕೆ ಬೆಲೆ ಇಲ್ಲ ಎಂದು ಶಿಕ್ಷಕ ಹೇಳಿದ್ದಾರೆ. ವಿದ್ಯಾರ್ಥಿಗೆ ಶಿಕ್ಷಕರು ಬೈಯುವ ವಿಡಿಯೋ ಸಾಮಾಜಿಕ ಜಾಲತಾಣಕ್ಕೆ ಹೇಗೆ ಬೇಕೋ ಹಾಗಿರುವುದರಿಂದ ಇದೆಲ್ಲಾ ಬೇಕಂತಲೇ ಮಾಡಿರಬಹುದಾ ಎನ್ನುವ ಅನುಮಾನ ನೆಟ್ಟಿಗರನ್ನು ಕಾಡಿದೆ.
परीक्षा में लिख आया भोजपुरी गाना, टीचर ने किया फोन और लगाई क्लास | Unseen India pic.twitter.com/E4nEQ4w6bm
— Utkarsh Singh (@UtkarshSingh_) October 20, 2022