ಇಂಧನ ಟ್ಯಾಂಕರ್‌ ಗೆ ಡಿಕ್ಕಿಯಾದ ಗೂಡ್ಸ್‌ ರೈಲು: ಹಲವು ಮನೆಗಳಿಗೆ ಬೆಂಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಗೂಡ್ಸ್‌ ರೈಲೊಂದು ಇಂಧನ ಟ್ಯಾಂಕರ್‌ ಗೆ ಡಿಕ್ಕಿಯಾದ ಪರಿಣಾಮ ಭಾರಿ ಬೆಂಕಿ ಹೊತ್ತಿಕೊಂಡು ಹಲವು ಮನೆಗಳು ಸುಟ್ಟುಹೋದ ಘಟನೆ ಮಧ್ಯ ಮೆಕ್ಸಿಕೋದಲ್ಲಿ ಸಂಭವಿಸಿದೆ. ಇಂಧನ ತುಂಬಿಕೊಂಡಿದ್ದ ಟ್ಯಾಂಕರ್ ಡಿಕಿಯ ರಭಸಕ್ಕೆ ರೈಲು ಮಾರ್ಗದ ಮೇಲ್ಸೇತುವೆಯಿಂದ ಉರುಳಿದೆ. ಪರಿಣಾಮವಾಗಿ ಹಲವು ಮನೆಗಳು ಸುಟ್ಟುಹೋಗಿವೆ. ಈ ಪ್ರದೇಶವನ್ನು ದಟ್ಟ ಹೊಗೆ ಆವರಿಸಿದೆ ಮತ್ತು ಜನರನ್ನು ಸಾಮೂಹಿಕ ಸ್ಥಳಾಂತರಿಸಲಾಗಿದೆ. ಆದರೆ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದಿಂದ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ತುಣುಕುಗಳು = ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಟ್ಯಾಂಕರ್ ಮೇಲ್ಸೇತುವೆಗೆ ಡಿಕ್ಕಿ ಹೊಡೆದು ಹತ್ತಿರದ ವಸತಿ ಪ್ರದೇಶಕ್ಕೆ ಬೆಂಕಿ ಹತ್ತಿದ ತಕ್ಷನವೇ 800 ರಿಂದ 1,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಗ್ವಾಸ್ಕಾಲಿಯೆಂಟೆಸ್ ಅಗ್ನಿಶಾಮಕ ಮುಖ್ಯಸ್ಥ ಮಿಗುಯೆಲ್ ಮುರಿಲ್ಲೊ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!