ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊಳಕೆಯೊಡೆದ ಕಾಳುಗಳನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಲಭ್ಯವಾಗುತ್ತವೆ. ಮೊಳಕೆ ಕಾಳುಗಳಲ್ಲಿ ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿವೆ. ಇವುಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ದೇಹವು ಚೈತನ್ಯದಿಂದ ಕೂಡಿರುತ್ತದೆ ಮತ್ತು ಶಾಶ್ವತವಾಗಿ ಯೌವನದಿಂದ ಕಾಣುತ್ತದೆ. ಮೊಳಕೆಯೊಡೆದ ಬೀಜಗಳಲ್ಲಿ ಕಿಣ್ವಗಳು ಹೇರಳವಾಗಿವೆ ಈ ಕಿಣ್ವಗಳು ಪ್ರೋಟೀನ್ಗಳು, ಉಪಯುಕ್ತ ಅಮೈನೋ ಆಮ್ಲಗಳು ಮತ್ತು ಕಾರ್ಬೋಹೈಡ್ರೇಟ್ಗಳನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತವೆ. ಮೊಳಕೆಯಲ್ಲಿ ನಾರಿನಂಶ ಅಧಿಕವಾಗಿರುತ್ತದೆ. ಇವು ಮಲಬದ್ಧತೆಯನ್ನು ತಡೆಯುತ್ತದೆ.
ಮೊಳಕೆಯೊಡೆದ ಬೀಜಗಳಲ್ಲಿ ವಿಟಮಿನ್ ಎ, ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಗರ್ಭಿಣಿಯರು ಮೊಳಕೆ ಕಾಳು ತಿಂದರೆ ಹುಟ್ಟುವ ಮಕ್ಕಳು ಆರೋಗ್ಯದಿಂದ ಇರುತ್ತಾರೆ. ಈ ಕಾಳುಗಳು ಮೊಳಕೆಯೊಡೆಯುವ ಸಮಯದಲ್ಲಿ 2 ಪಟ್ಟು ಹೆಚ್ಚು ವಿಟಮಿನ್ ಎ, 5 ರಿಂದ 10 ಪಟ್ಟು ಹೆಚ್ಚು ವಿಟಮಿನ್ ಬಿ ಮತ್ತು ಸಿ ಲಭ್ಯವಿದೆ. ಅವರೆಕಾಳು, ಗೋಧಿ, ನವಣೆ, ಸೋಯಾ ಬೀನ್ಸ್, ದ್ವಿದಳ ಧಾನ್ಯಗಳನ್ನು ಮೊಳಕೆ ಮಾಡಬಹುದು.
ಮೊಳಕೆ ಕಾಳುಗಳಿಗೆ ಪಾಲಕ್, ಕ್ಯಾರೆಟ್, ಬೀಟ್ ರೂಟ್ ಮುಂತಾದ ತರಕಾರಿಗಳನ್ನು ಸೇರಿಸುವುದರಿಂದ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತವೆ. ಮೊಳಕೆ ಕಾಳುಗಳನ್ನು ತಿನ್ನುವುದರಿಂದ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚುತ್ತದೆ ಮತ್ತು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.