ಹೊಸದಿಗಂತ ಡಜಿಟಲ್ ಡೆಸ್ಕ್:
ಕಾಂತಾರ ನೋಡಿ ಹೊಗಳದವರಿಲ್ಲ ಎನ್ನುವ ಮಟ್ಟಿಗೆ ಸಿನಿಮಾ ಯಶಸ್ಸು ಸಾಧಿಸಿದೆ. ಸ್ಯಾಂಡಲ್ವುಡ್ನಿಂದ ಬಾಲಿವುಡ್ವರೆಗೂ ಕಾಂತಾರ ಕಂಪು ಹರಡಿದೆ.
ಸದಾ ಟೀಕೆ, ವಿಮರ್ಶೆಗಳಿಗೆ ಹೆಸರಾಗಿರುವ ಕಂಗನಾ ರನೌತ್ ಕಾಂತಾರ ನೋಡಿ ಫಿದಾ ಆಗಿದ್ದಾರೆ. ಈ ಹಿಂದೆ ಕಾಂತಾರ ಬಗ್ಗೆ ಸಾಕಷ್ಟು ಉತ್ತಮ ಅಭಿಪ್ರಾಯ ಕೇಳಿಬರುತ್ತಿದೆ ಸಿನಿಮಾ ನೋಡಬೇಕು ಎಂದು ಕಂಗನಾ ಹೇಳಿಕೊಂಡಿದ್ದರು.
ಕುಟುಂಬದ ಜೊತೆ ಸಿನಿಮಾ ನೋಡಿ ಬಂದೆ. ನನಗೆ ಇನ್ನೂ ಸಿನಿಮಾದಿಂದ ಹೊರಬರೋಕೆ ಆಗಿಲ್ಲ, ಕೈ ನಡುಗುತ್ತಿದೆ. ರಿಷಭ್ ಶೆಟ್ಟಿ ಹ್ಯಾಟ್ಸ್ಆಫ್ ಇಂಥ ಸಿನಿಮಾ ಮಾಡಿದ್ದಕ್ಕೆ. ಕಥೆ, ನಿರ್ದೇಶನ, ಫೈಟ್, ಸಿನಿಮಾಟೊಗ್ರಫಿ, ಆಕ್ಟಿಂಗ್ ಬ್ರಿಲಿಯಂಟ್ ಆಗಿದೆ. ಸಂಪ್ರದಾಯ, ಜಾನಪದವನ್ನು ಎಷ್ಟು ಚೊಕ್ಕವಾಗಿ ಸೇರಿಸಿದ್ದೀರಿ, ಸಿನಿಮಾ ಎಂದರೆ ಹೀಗಿರಬೇಕು. ಸಿನಿಮಾ ಮುಗಿದ ಮೇಲೆ ಅಲ್ಲಿ ಜನ ನಿಂತು ಮಾತನಾಡುತ್ತಿದ್ದರು. ಈ ರೀತಿ ಸಿನಿಮಾ ಹಿಂದೆಲ್ಲೂ ನೋಡಿಲ್ಲ ಎಂದು. ಧನ್ಯವಾದಗಳು, ನನಗೆ ಹ್ಯಾಂಗ್ಓವರ್ನಿಂದ ಹೊರಬರೋಕೆ ಒಂದು ವಾರವಾದರೂ ಬೇಕು ಎಂದಿದ್ದಾರೆ.
Thank you for the heart warming response #KanganaRanaut.
We are still in awe of the art and the craft and still that feeling is yet to sink in.#Kantara @shetty_rishab @VKiragandur @hombalefilms @gowda_sapthami @HombaleGroup @AJANEESHB #ArvindKashyap @actorkishore @KantaraFilm pic.twitter.com/ebXvb2xxOz
— Kantara – A Legend (@KantaraFilm) October 20, 2022