ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಟಾಟಾ ಗ್ರಾಹಕ ಉತ್ಪನ್ನಗಳ ನಿವ್ವಳ ಆದಾಯವು 36 ಶೇಕಾದಷ್ಟು ಏರಿಕೆಯಾಗಿದೆ. ಒಟ್ಟೂ 355ಕೋಟಿ ರೂ ಲಾಭ ಗಳಿಸಿದ್ದು ಇದು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 261 ಕೋಟಿ ರೂ ಗಳಷ್ಟಿತ್ತು. ಆದಾಯವು ಅದೇ ಅವಧಿಯಲ್ಲಿ 3,033 ಕೋಟಿ ರೂ.ಗಳಿಂದ 3,363 ಕೋಟಿ ರೂ.ಗೆ ಅಂದರೆ 11 ಶೇಕಡಾ ಏರಿಕೆಯಾಗಿದೆ.
“ಹಣದುಬ್ಬರದ ಒತ್ತಡ, ಕರೆನ್ಸಿಯ ದೌರ್ಬಲ್ಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೆಲೆಯಲ್ಲಿ ಸ್ವಲ್ಪ ಮಂದಗತಿಯ ಹೊರತಾಗಿಯೂ ನಾವು ಎರಡಂಕಿಯ ಆದಾಯದ ಬೆಳವಣಿಗೆಯನ್ನು ದಾಖಲಿಸಿದ್ದೇವೆ” ಎಂದು ಟಾಟಾ ಗ್ರಾಹಕ ಉತ್ಪನ್ನಗಳ ಎಂಡಿ ಮತ್ತು ಸಿಇಒ ಸುನಿಲ್ ಡಿಸೋಜಾ ಹೇಳಿದ್ದಾರೆ.
ದೇಶೀಯ ವ್ಯವಹಾರದಲ್ಲಿ, ಬೆಲೆ ತಿದ್ದುಪಡಿಗಳಿಂದ ಭಾರತದ ಪ್ಯಾಕೇಜ್ಡ್ ಪಾನೀಯಗಳ ವ್ಯಾಪಾರವು 7% ಆದಾಯದ ಕುಸಿತವನ್ನು ದಾಖಲಿಸಿದೆ.
ಟಾಟಾ ಸಾಲ್ಟ್, ಟಾಟಾ ಸಂಪನ್, ನೂರಿಶ್‌ಕೋ, ಟಾಟಾ ಸೋಲ್‌ಫುಲ್ ಮತ್ತು ಕಾಫಿ ವಿಭಾಗಗಳು ಬಲವಾದ ಬೆಳವಣಿಗೆಯನ್ನು ಕಂಡಿವೆ.
ಟಾಟಾ ಸ್ಟಾರ್‌ಬಕ್ಸ್ ತ್ರೈಮಾಸಿಕದಲ್ಲಿ 57 ಶೇಕಡಾದಷ್ಟು ಬಲವಾದ ಆದಾಯದ ಬೆಳವಣಿಗೆಯನ್ನು ದಾಖಲಿಸಿದೆ.