ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ 9 ರ ಸೀಸನ್ ನಾಲ್ಕನೇ ವಾರಕ್ಕೆ ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಈ ವಾರ ಬಿಗ್ ಬಾಸ್ ವಿಭಿನ್ನ ಆಟಗಳನ್ನು ನೀಡಿತ್ತು.
ಸ್ಪರ್ಧಿಗಳಿಗೆ ರಾತ್ರಿ ಇಡೀ ಲೈಟ್ನ್ನ ಒತ್ತಿ ಹಿಡಿಯುವ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿತ್ತು. ಅದರಂತೆ ರಾತ್ರಿಯಿಡಿ ಕೆಲವೊಬ್ಬ ಸ್ಪರ್ಧಿಗಳು ಹಿಡಿದು ನಿಂತಿದ್ದರು. ಅದರಲ್ಲಿ ಆರ್ಯವರ್ಧನ್ ಗುರೂಜಿ ಕೂಡ ಒಬ್ಬರು. ಆದರೆ ಇದೀಗ ಗುರೂಜಿ ಈ ವೇಳೆ ಮಡಿದ ಕೆಲಸವೊಂದು ದೊಡ್ಡ ಮನೆಯ ನಗುವಿಗೆ ಅಷ್ಟೆ ಅಲ್ಲದೆ ಪ್ರೇಕ್ಷಕರಿಗೂ ನಗು ತರುವಂತೆ ಮಾಡಿದೆ.
ಲೈಟ್ ಕಂಬವನ್ನು ಒತ್ತಿ ಹಿಡಿದ ಗುರೂಜಿಗೆ ಅರ್ಜೆಂಟ್ ಆಗಿ ವಾಶ್ರೂಮ್ಗೆ ಹೋಗಬೇಕಾಗಿ ಬಂತು. ಆದರೆ ಲೈಟ್ ಬಿಟ್ಟು ಹೋದರೆ ಆಟ ಸೋಲುತ್ತೇನೆ ಅಂತ ತಾವು ಇದ್ದಲ್ಲಿಯೇ ಮೂತ್ರ ಮಾಡಿಕೊಂಡಿದ್ದಾರೆ.
ಕೊನೆಗೂ ಈ ಆಟ ಗೆದ್ದಿದ್ದಾರೆ ಗುರೂಜಿ. ಇನ್ನು ಗುರೂಜಿಯ ಈ ಅವಸ್ಥೆಗೆ ಮೊದಲು ಮನೆಯವರೆಲ್ಲರೂ ರೇಗಿಸಿದರು. ಆದರೂ ನಂತರ ಗುರೂಜಿ ಹಠ ಹಾಗೂ ಛಲ ನೋಡಿ ಮನೆಮಂದಿ ಹೊಗಳಿದ್ದಾರೆ.