ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಆರು ತಿಂಗಳು ಬಾಕಿ ಇರುವಾಗಲೇ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಭರದ ಭರ್ಜರಿ ಸಿದ್ಧತೆ ನಡೆಸುತ್ತಿದ್ದು,ಗೆಲವಿನ ರಣತಂತ್ರ ರೂಪಿಸುತ್ತಿದೆ.
ಇದೀಗ ಜೆಡಿಎಸ್ ಒಂದು ಹೆಜ್ಜೆ ಮುಂದೆ ಹೋಗಿದ್ದು, 2023ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ.
ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಅವರು ಮೈಸೂರು ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಜೆಡಿಎಸ್ ಜೊತೆ ಮುನಿಸಿಕೊಂಡು ಪಕ್ಷ ತೊರೆಯಲು ಮುಂದಾಗಿದ್ಧ ಶಾಸಕ ಜಿ.ಟಿ.ದೇವೇಗೌಡರ ಅವರನ್ನು ಗುರುವಾರ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಖುದ್ಧು ಭೇಟಿಯಾಗಿ ಮನವೊಲಿಸಿದ್ದರು. ಅವರು ನಡೆಸಿದ ಸಂಧಾನ ಯಶ್ವಸಿಯಾಗಿದ್ದು, ಜಿ.ಟಿ. ದೇವೇಗೌಡರು ಜೆಡಿಎಸ್‌ನಲ್ಲೇ ಉಳಿದಿದ್ದಾರೆ. ಮೈಸೂರು ಚುನಾವಣಾ ಉಸ್ತುವಾರಿಯನ್ನು ಜಿ.ಟಿ ದೇವೇಗೌಡರಿಗೆ ನೀಡಲಾಗಿದೆ.
ಶಾಸಕ ಜಿ. ಟಿ. ದೇವೇಗೌಡ ಮುಂದಿನ ಚುನಾವಣೆಗೆ ಚಾಮುಂಡೇಶ್ವರಿಯಿಂದಲೇ ಸ್ಪರ್ಧೆ ಮಾಡಲಿದ್ದಾರೆ. ಇನ್ನು ಪುತ್ರ ಜಿ. ಟಿ. ಹರೀಶ್ ಗೌಡಗೆ ಸಹ ಟಿಕೆಟ್ ಪಡೆಯುವಲ್ಲಿ ಜಿಟಿಡಿ ಯಶಸ್ವಿಯಾಗಿದ್ದಾರೆ.
ಮೈಸೂರು ಜಿಲ್ಲಾ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ
* ಚಾಮುಂಡೇಶ್ವರಿ – ಜಿ. ಟಿ. ದೇವೇಗೌಡ
* ಹುಣಸೂರು – ಜಿ. ಟಿ. ಹರೀಶ್ ಗೌಡ
* ಕೆ. ಆರ್. ನಗರ – ಸಾ. ರಾ. ಮಹೇಶ್
* ಪಿರಿಯಾಪಟ್ಟಣ – ಕೆ. ಮಹದೇವ್
* ಟಿ. ನರಸೀಪುರ – ಅಶ್ವಿನ್
* ಎಚ್. ಡಿ. ಕೋಟೆ – ಜಯಪ್ರಕಾಶ್