ಹೊಸದಿಗಂತ ಡಿಜಿಟಲ್ ಡೆಸ್ಕ್:
ಕದಿಯಲು ಅಂಗಡಿ ಹೊಕ್ಕಿದ್ದ ಖದೀಮ ಸಿಕ್ಕಿಬಿದ್ದಿದ್ದು, ಜನರ ಹೊಡೆತದಿಂದ ತಪ್ಪಿಸಿಕೊಳ್ಳಲು ಪೊಲೀಸರಿಗೇ ಕರೆ ಮಾಡಿ ನನ್ನನ್ನು ಕಾಪಾಡಿ ಎಂದು ಕೇಳಿಕೊಂಡಿದ್ದಾನೆ.
ಬಾಂಗ್ಲಾದೇಶದ ಬರಿಶಾಲ್ನಲ್ಲಿ ಘಟನೆ ನಡೆದಿದೆ. ಬಂದಾರ್ ಪ್ರದೇಶದ ದಿನಸಿ ಅಂಗಡಿಯೊಂದಕ್ಕೆ ಕಳ್ಳ ನುಗ್ಗಿದ್ದ. ಹೊರಬರಲಾರದೆ ರಾತ್ರಿಯಿಡೀ ಅಲ್ಲಿಯೇ ಕಳೆಯಬೇಕಾಗಿತ್ತು. ಆತ ತಪ್ಪಿಸಿಕೊಳ್ಳಲಾರದೆ ಒದ್ದಾಡುತ್ತಿದ್ದ.
ಬೆಳಗ್ಗೆ ವೇಳೆಗೆ ಜನ ಅಂಗಡಿ ಮುಂದೆ ಜಮಾಯಿಸಿದ್ದು, ಈಗ ಹೊರಗೆ ಹೋದರೆ ಒದೆ ಖಂಡಿತ ಎಂದು ಅರಿತ ಕಳ್ಳ, ಸೀದ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾನೆ. ಕಳ್ಳತನ ಮಾಡಲು ಬಂದು ಸಿಕ್ಕಿಬಿದ್ದಿದ್ದೇನೆ, ಜನ ಹೊಡೆಯುತ್ತಾರೆ. ದಯವಿಟ್ಟು ನನ್ನನ್ನು ಕಾಪಾಡಿ ಎಂದು ಹೇಳಿದ್ದಾನೆ.
ಪೊಲೀಸರು ಸ್ಥಳಲ್ಲೆ ಧಾವಿಸಿದ್ದಾರೆ. ಈ ಬಗ್ಗೆ ಪೊಲೀಸರು ಮಾತನಾಡಿ, ಕಳ್ಳನೇ ನನಗೆ ಕರೆ ಮಾಡಿ ಕಾಪಾಡಿ ಎಂದು ಕೇಳಿದ್ದು ಇದೇ ಮೊದಲು ಎಂದಿದ್ದಾರೆ.