ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಪ್ರಯುಕ್ತ ಗುಜರಾತ್ನಲ್ಲಿ ಅ.21 ರಿಂದ 27 ರವರೆಗೆ ಸಂಚಾರ ನಿಯಮ ಉಲ್ಲಂಘಟನೆಯಾದರೂ ಸಾರ್ವಜನಿಕರಿಗೆ ದಂಡ ಹಾಕುವಂತಿಲ್ಲ ಎಂದು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಹೇಳಿದ್ದಾರೆ.
ಪೊಲೀಸರು ಏಳು ದಿನ ದಂಡ ವಿಧಿಸುವುದಿಲ್ಲ, ಹಾಗಂತ ಬೇಕಂತಲೇ ನಿಯಮ ಉಲ್ಲಂಘನೆ ಮಾಡಬೇಡಿ. ಟ್ರಾಫಿಕ್ ನಿಯಮ ಪಾಲಿಸುವುದು ನಿಮ್ಮ ಕರ್ತವ್ಯ, ನೀವು ತಪ್ಪು ಮಾಡಿದರೂ ಏಳು ದಿನ ದಂಡ ಪಾವತಿಸದೆ ತೆರಳಲು ಪೊಲೀಸರು ಅವಕಾಶ ಕೊಡುತ್ತಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.