ವಿಶ್ವಕಪ್: ಟೀಂ ಇಂಡಿಯಾ ಗುಂಪಿನಲ್ಲಿ ಯಾವ ತಂಡಗಳಿವೆ? ಯಾವಾಗ ಮುಖಾಮುಖಿ? ಪಂದ್ಯದ ಸಮಯ, ನೇರಪ್ರಸಾರ ಕುರಿತ ಮಾಹಿತಿ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಕ್ಟೋಬರ್ 17 ರಂದು ಪ್ರಾರಂಭಗೊಂಡ ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯಗಳು ಮುಕ್ತಾಯಗೊಂಡು ನಿರ್ಣಾಯಕ ಘಟ್ಟಕ್ಕೆ ಕಾಲಿಟ್ಟಿವೆ. ಸುಪರ್‌- 12 ಹಂತದ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ- ನ್ಯೂಜಿಲೆಂಡ್‌ ತಂಡಗಳು ಮುಖಾಮುಖಿಯಾಗಿದೆ. ಈ ವಿಶ್ವಕಪ್‌ ಆರಂಭದಲೇ ಅಚ್ಚರಿಯ ಫಲಿತಾಂಶಗಳಿಗೆ ಸಾಕ್ಷಿಯಾಗುತ್ತಿದೆ. ಉದ್ಘಾಟನಾ ಪಂದ್ಯದಲ್ಲೇ ಏಷ್ಯನ್‌ ಚಾಂಪಿಯನ್‌ ಶ್ರೀಲಂಕಾ ತಂಡಕ್ಕೆ ಕ್ರಿಕೆಟ್‌ ಶಿಶು ನಮೀಬಿಯಾ ಶಾಕ್‌ ನೀಡಿತ್ತು. 2 ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಐರ್ಲೆಂಡ್‌ ವಿರುದ್ಧ ಸೋತು ಪಂದ್ಯಾವಳಿಯಿಂದಲೇ ಹೊರಬಿದ್ದಿದೆ. ಈ ಬಾರಿ ಕಪ್‌ ಗೆಲ್ಲುವ ನೆಚ್ಚಿನ ತಂಡವಾದ ಟೀಂ ಇಂಡಿಯಾ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಆ ಗುಂಪಿನಲ್ಲಿ ಯಾವ್ಯಾವ ತಂಡಗಳಿವೆ, ಯಾವಾಗ ಮುಖಾಮುಖಿ, ಪಂದ್ಯದ ಸಮಯ, ನೇರಪ್ರಸಾರ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.
ಟಿ 20 ವಿಶ್ವಕಪ್‌ ಗೆ ಇಂದು ಅಧಿಕೃತ ಚಾಲನೆ ಸಿಕ್ಕರೂ ನಿಜವಾದ ರೋಚಕತೆ ನಾಳೆ (ಅ.23) ತೆರೆದುಕೊಳ್ಳಲಿದೆ.  ಭಾನುವಾರ ಎಂಸಿಜಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತನ್ನ 2022 T20 ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ. 2007 ರ ಬಳಿಕ ಭಾರತ ಟಿ 20 ವಿಶ್ವಕಪ್ ಗೆದ್ದಿಲ್ಲ. ಕಳೆದ ವಿಶ್ವಕಪ್‌ ನಲ್ಲಿ ಪಾಕ್‌ ಮೊಟ್ಟ ಮೊದಲ ಬಾರಿ ಭಾರತವನ್ನು ತಂಡವನ್ನು ಸೋಲಿಸಿತ್ತು. ಈ ಗಾಯ ಹಸಿಯಾಗಿದ್ದು ಪಾಕ್‌ ತಂಡವನ್ನು ಈ ಬಾರಿ ಹೀನಾಯವಾಗಿ ಬಗ್ಗು ಬಡಿಯುವ ಮೂಲಕ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಲು ರೋಹಿತ್‌ ಪಡೆ ತಹತಹಿಸುತ್ತಿದೆ.

ಸೂಪರ್ 12 ಗುಂಪುಗಳು:
ಗುಂಪು 1: ಅಫ್ಘಾನಿಸ್ತಾನ, ಆಸ್ಟ್ರೇಲಿಯಾ (ಆತಿಥೇಯ), ಇಂಗ್ಲೆಂಡ್, ನ್ಯೂಜಿಲೆಂಡ್, ಐರ್ಲೆಂಡ್, ಶ್ರೀಲಂಕಾ
ಗುಂಪು 2: ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ನೆದರ್ಲ್ಯಾಂಡ್ಸ್, ಜಿಂಬಾಬ್ವೆ

T20 ವಿಶ್ವ ಕಪ್ 2022 ರಲ್ಲಿ ಭಾರತದ ವೇಳಾಪಟ್ಟಿ
ಭಾರತ vs ಪಾಕಿಸ್ತಾನ
: 23ನೇ ಅಕ್ಟೋಬರ್, ಭಾನುವಾರ ಮಧ್ಯಾಹ್ನ 1:30 ಕ್ಕೆ

ಭಾರತ vs ನೆದರ್ಲ್ಯಾಂಡ್: 27ನೇ ಅಕ್ಟೋಬರ್, ಗುರುವಾರ ಮಧ್ಯಾಹ್ನ 12:30 ಕ್ಕೆ

ಭಾರತ vs ದಕ್ಷಿಣ ಆಫ್ರಿಕಾ: 30 ಅಕ್ಟೋಬರ್, ಭಾನುವಾರ ಸಂಜೆ 4:30 ಕ್ಕೆ

ಭಾರತ vs ಬಾಂಗ್ಲಾದೇಶ: 2ನೇ ನವೆಂಬರ್, ಬುಧವಾರ ಮಧ್ಯಾಹ್ನ 1:30 ಕ್ಕೆ ಕ್ಕೆ

ಭಾರತ vs ಜಿಂಬಾಬ್ವೆ: 6ನೇ ನವೆಂಬರ್, ಭಾನುವಾರ ಮಧ್ಯಾಹ್ನ 1:30 ಕ್ಕೆ

ಟಿ20 ವಿಶ್ವಕಪ್ ಪಂದ್ಯದ ಲೈವ್ ಸ್ಟ್ರೀಮಿಂಗ್ ಎಲ್ಲಿ?
ಟಿ20 ವಿಶ್ವಕಪ್-2022 ರಲ್ಲಿ ಭಾರತ ತಂಡ ಆಡುವ ಪಂದ್ಯಗಳೂ ಸೇರಿದಂತೆ ಎಲ್ಲಾ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಸ್ಟಾರ್‌ ವಾಹಿನಿಯ ಚಾನೆಲ್‌ ಗಳಲ್ಲಿ ಲಭ್ಯವಿರುತ್ತದೆ, ಜೊತೆಗೆ  ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ ಇರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!