ಪಾಕಿಸ್ತಾನಕ್ಕೆ ಕಳಿಸುತ್ತಿಲ್ಲ ಎಂದಾದಲ್ಲಿ ಅವರ ಜೊತೆ ನಾಳೆ ಕ್ರಿಕೆಟ್ ಪಂದ್ಯ ಯಾಕೆ?: ಓವೈಸಿ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್‌

ಭಾರತ ಪಾಕ್ ನಡುವೆ ನಾಳೆ ಆಸ್ಟ್ರೇಲಿಯಾದಲ್ಲಿ ಮೆಲ್ಬೋರ್ನ್‌ನಲ್ಲಿ ಟಿ೨೦ ವಿಶ್ವಕಪ್ ನ ಮೊದಲ ಪಂದ್ಯ ನಡೆಯಲಿದ್ದು, ಇದರ ಬೆನ್ನಲ್ಲೇ ವ ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ಅಪ್ಪಸ್ವರ ಎತ್ತಿದ್ದಾರೆ.

ಪಾಕಿಸ್ತಾನಕ್ಕೆ ಭಾರತ ತಂಡವನ್ನು ಕಳಿಸಲು ಬಿಸಿಸಿಐ ನಿರಾಕರಿಸಿದ ವಿಚಾರವಾಗಿ ಮಾತನಾಡಿರುವ ಓವೈಸಿ, ಪಾಕಿಸ್ತಾನಕ್ಕೆ ತಂಡವನ್ನು ಕಳಿಸುತ್ತಿಲ್ಲ ಎಂದಾದಲ್ಲಿ ಮೆಲ್ಬೋರ್ನ್‌ನಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಆಟವಾಡುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿದ್ದಾರೆ.

ನೀವು ಪಾಕಿಸ್ತಾನಕ್ಕೆ ಹೋಗಿ ಆಡೋದಿಲ್ಲ ಅಂತೀರಿ, ಹಾಗಿದ್ದಲ್ಲಿ ಆಸ್ಟ್ರೇಲಿಯಾದಲ್ಲಿ ನಾಳೆ ಯಾಕೆ ಆಟವಾಡುತ್ತಿದ್ದೀರಿ? ನೀವು ಅಲ್ಲಿಯೂ ಆಡಬಾರದಿತ್ತು. ಪಾಕಿಸ್ತಾನಕ್ಕೆ ಹೋಗೋದಿಲ್ಲ. ಆದರೆ, ಆಸ್ಟ್ರೇಲಿಯಾದಲ್ಲಿ ಪಾಕ್ ವಿರುದ್ಧ ಆಡ್ತೇವೆ. ಈ ಪ್ರೀತಿಗೆ ಏನನ್ನೋಣ? ಎಂದು ಕೇಳಿದ್ದಾರೆ.

ಪಾಕಿಸ್ತಾನದ ಹೋಗುವುದು ಬೇಡ ಅಂತ ಇದ್ದರೆ ನಾವುಅವರ ವಿರುದ್ಧ ಆಡೋದೇ ಬೇಡ. ಇದರಿಂದ ಆಗೋದಾದರೂ ಏನು? ಟಿವಿಯವರಿಗೆ ಒಂದು 2 ಸಾವಿರ ಕೋಟಿ ನಷ್ಟವಾಗಬಹುದು. ಆದರೆ, ಇದಕ್ಕಿಂತ ಭಾರತವೇ ಮುಖ್ಯ? ಹಾಗಾಗಿ ಪಾಕಿಸ್ತಾನದ ವಿರುದ್ಧ ಭಾರತ ಆಡೋದೇ ಬೇಡ ಎಂದು ಹೇಳಿದ್ದಾರೆ.

ಇನ್ನು ಪಂದ್ಯದಲ್ಲಿ ಯಾರು ಗೆಲುವರು ಎಂದು ಕೇಳಿದ್ದಕ್ಕೆ , ನನಗೆ ಗೊತ್ತಿಲ್ಲ ಪಂದ್ಯದಲ್ಲಿ ಯಾರು ಗೆಲುವು ಸಾಧಿಸ್ತಾರೆ ಅನ್ನೋದು. ಹಾಗಿದ್ದರೂ ನಾನು ಭಾರತ ಗೆಲುವು ಸಾಧಿಸಲಿ ಎಂದು ಬಯಸುತ್ತೇನೆ. ನಮ್ಮ ಮಕ್ಕಳಾದ ಮೊಹಮದ್‌ ಶಮಿ ಹಾಗೂ ಮೊಹಲದ್ ಸಿರಾಜ್‌ ಪಾಕಿಸ್ತಾನವನ್ನು ಸೋಲಿಸಲು ಶ್ರೇಷ್ಠ ಆಟವಾಡಲಿ ಎಂದು ಬಯಸೋದಾಗಿ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!