ಧ್ವನಿವರ್ಧಕ ಬಳಸಲು ಸರ್ಕಾರ ಗ್ರೀನ್ ಸಿಗ್ನಲ್: ನಿಯಮ ಪಾಲನೆ ಕಡ್ಡಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್‌

ರಾಜ್ಯ ಸರಕಾರ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಧ್ವನಿವರ್ಧಕ ಬಳಸುವಂತೆ ಗ್ರೀನ್ ಸಿಗ್ನಲ್ ನೀಡಿದೆ.

ಸರಕಾರ ಲೌಡ್​ ಸ್ಪೀಕರ್​ಗೆ ಪರವಾನಿಗೆ ನೀಡಲು ಮಸೀದಿ, ದೇವಾಲಯ, ಚರ್ಚ್‍ಗಳಿಗೆ, ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಅದೇ ರೀತಿ ಪರವಾನಗಿ ನೀಡುವ ಅಧಿಕಾರವನ್ನು ಸರ್ಕಾರ ರಾಜ್ಯ ಪೊಲೀಸರಿಗೆ ನೀಡಲಾಗಿತ್ತು. ಅದರಂತೆ ಸುಮಾರು 17,850 ಅರ್ಜಿಗಳು ಬಂದಿದ್ದು, . ಇದರಲ್ಲಿ 10,889 ಮಸೀದಿಗಳಿಗೆ, 3000ಕ್ಕೂ ಹೆಚ್ಚು ಹಿಂದೂ ದೇವಾಲಯ, 1,400ಕ್ಕೂ ಹೆಚ್ಚು ಚರ್ಚ್‍ಗಳಿಗೆ ಸರ್ಕಾರ 2 ವರ್ಷಗಳವರೆಗೆ ಅನುಮತಿ ನೀಡಿದ್ದು, 450 ರೂ ಶುಲ್ಕ ಕಟ್ಟಲು ಸೂಚಿಸಿವೆ.

ಈ ಧ್ವನಿವರ್ಧಕ ಬಳಸಲು ಒಂದಿಷ್ಟು ನಿಯಮ ಮಾಡಲಾಗಿದೆ. ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಮಾತ್ರ ಲೌಡ್ ಸ್ಪೀಕರ್ ಬಳಸಬೇಕು. ಕೈಗಾರಿಕಾ ಪ್ರದೇಶದಲ್ಲಿ ಹಗಲಿನಲ್ಲಿ 75 ಡೆಸಿಬಲ್ ಮತ್ತು ರಾತ್ರಿ 70 ಡೆಸಿಬಲ್ ಶಬ್ದದ ಮಟ್ಟ ಇರಬೇಕು. ವಾಣಿಜ್ಯ ಪ್ರದೇಶಗಳಲ್ಲಿ ಹಗಲಿನಲ್ಲಿ 65 ಡೆಸಿಬಲ್ ಮತ್ತು ರಾತ್ರಿ 55 ಡೆಸಿಬಲ್ ಶಬ್ದದ ಮಟ್ಟ ಇರಬೇಕು. ವಸತಿ ವಲಯಗಳಲ್ಲಿ, ಶಬ್ದದ ಮಟ್ಟವು ಹಗಲಿನಲ್ಲಿ 55 ಡೆಸಿಬಲ್ ಮತ್ತು ರಾತ್ರಿಯಲ್ಲಿ 45 ಡೆಸಿಬಲ್ ಬಳಸಬಹುದು. ಶಾಂತ ವಲಯದಲ್ಲಿ ಹಗಲಿನಲ್ಲಿ 50 ಡೆಸಿಬಲ್ ಮತ್ತು ರಾತ್ರಿಯಲ್ಲಿ 40 ಡೆಸಿಬಲ್ ಇರಬೇಕು. ಲೌಡ್ ಸ್ಪೀಕರ್ ಜಾಗದಲ್ಲಿ ಡೆಸಿಬಲ್ ನಿಯಂತ್ರಿಸೋ ಉಪಕರಣ ಅಳವಡಿಕೆ ಕಡ್ಡಾಯ ಎಂದು ಹೇಳಿದೆ.

ಆಜಾನ್ ವಿರುದ್ಧ ಹೋರಾಟ ಶುರುವಾದ ಬೆನ್ನಲ್ಲೇ ಸರ್ಕಾರ ಅನುಮತಿ ಇಲ್ಲದೆ ಲೌಡ್​ ಸ್ಪೀಕರ್​ ಬಳಸುವಂತಿಲ್ಲ ಎಂದು ನಿರ್ಬಂಧ ಹೇರಿತ್ತು. ಇದೀಗ ಧ್ವನಿವರ್ಧಕ ಬಳಸುವಂತೆ ಅವಕಾಶ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!