ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಲ್ಬೋರ್ನ್ ನ ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಪಾಕ್ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿರುವ ಭಾರತ ತಂಡ ಬೌಲರ್ ಗಳ ದಾಳಿಗೆ ಪಾಕಿಸ್ತಾನದ ಮೊದಲ ವಿಕೆಟ್ ಪತನವಾಗಿದೆ.
ಓಪ್ನರ್ ಆಗಿ ಕಣಕ್ಕಿಳಿದ ಬಾಬರ್ ಆಜಂ ಎರಡನೇ ಓವರ್ ನ ಮೊದಲ ಎಸೆತದಲ್ಲಿ ಭಾರತದ ವೇಗಿ ಅರ್ಶದೀಪ್ ಸಿಂಗ್ ಗೆ ತಮ್ಮ ವಿಕೆಟ್ ಒಪ್ಪಿಸಿದ್ದಾರೆ. ಮೊದಲ ಓವರ್ ನಲ್ಲಿ ಭುವನೇಶ್ವರ್ ಕುಮಾರ್ ಆವರ ವೇಗದ ಎಸೆತಗಳಿಗೆ ಪಾಕ್ ಯಾವುದೇ ರನ್ ಗಳಿಸಿಲ್ಲವಾದರೂ ಒಂದು ವೈಡ್ ಎಸೆದಿದ್ದರಿಂದ ಪಾಕ್ ಒಂದು ಓವರ್ ಗೆ ಒಂದು ರನ್ ಗಳಿಸಿಒಂದು ವಿಕೆಟ್ ಕಳೆದುಕೊಂಡಿದೆ.