ಹೊಸದಿಗಂತ ವರದಿ ವಿಜಯಪುರ:
ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಬಿಜೆಪಿಯ 14 ಮಂದಿ ಪದಾಧಿಕಾರಿಗಳನ್ನು 6 ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಆದೇಶ ಹೊರಡಿಸಿದ್ದಾರೆ.
ಪಕ್ಷದ ನಿರ್ಧಾರಗಳನ್ನು ಧಿಕ್ಕರಿಸಿ ಪಕ್ಷವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಭಾರತಿ ಭುಯ್ಯಾರ, ಅಲ್ತಾಫ್ ಇಟಗಿ, ಬಾಬು ಜಾಧವ, ಬಾಬು ಶಿರಶ್ಯಾಡ, ಅಶೋಕ ನ್ಯಾಮಗೊಂಡ, ಚನ್ನಪ್ಪ ಚಿನಗುಂಡಿ, ಬಸವರಾಜ ಗೊಳಸಂಗಿ, ಅಭಿಷೇಕ ಸಾವಂತ, ಬಾಬು ಏಳಗಂಟಿ, ರವಿ ಬಗಲಿ, ಬಸಪ್ಪ ಹಳ್ಳಿ, ಸವಿತಾ ಪಾಟೀಲ, ಸಂಗೀತಾ ಪೋಳ, ರಾಜು ಬಿರಾದಾರ ಅವರನ್ನು ಉಚ್ಚಾಟಿಸಲಾಗಿದೆ.