ಸಿಹಿ ಮತ್ತು ಟೇಸ್ಟಿ, ಆರೋಗ್ಯಕ್ಕೆ ಹಿತವಾದ ಆಮ್ಲಾ ಮುರಬ್ಬಾ ಮಾಡೋದು ಹೇಗೆ?  

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ದೈನಂದಿನ ಆಹಾರದಲ್ಲಿ ಬೆಟ್ಟದ ನೆಲ್ಲಿಕಾಯಿ ಬಳಸುವುದರಿಂದ ದೇಹದಲ್ಲಿ ನೈಟ್ರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ದೇಹದಲ್ಲಿರುವ ಹಾನಿಕಾರಕ ವಸ್ತುಗಳನ್ನು ತೆಗೆದುಹಾಕುವ ಮೂಲಕ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಬೇಕಾಗುವ ಪದಾರ್ಥಗಳು:

ಸಕ್ಕರೆ-ಅರ್ಧ ಕೆಜಿ
ಉಪ್ಪು-,1/2 ಚಮಚ ,
ನಿಂಬೆ ರಸ-1/2 ಚಮಚ,
ಏಲಕ್ಕಿ ಪುಡಿ- 1/4 ಚಮಚ, ನೀರು

ಮಾಡುವ ವಿಧಾನ:

ಬೆಟ್ಟದ ನೆಲ್ಲಿಕಾಯಿ ತೆಗೆದುಕೊಂಡು ಅವುಗಳನ್ನು ಸ್ವಚ್ಛಗೊಳಿಸಿ ತೇವವಿಲ್ಲದಂತೆ ಒರೆಸಿಡಿ. ನಂತರ ಒಂದು ಇಡ್ಲಿ ಪಾತ್ರೆ ತೆಗೆದುಕೊಂಡು ನೀರು ಹಾಕಿ ಬಿಸಿ ಮಾಡಿ. ಇಡ್ಲಿ ತಟ್ಟೆಯಲ್ಲಿ ಬೆಟ್ಟದ ನೆಲ್ಲಿಕಾಯಿ ಇಟ್ಟು, 10 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ. ಮಧ್ಯಮ ಉರಿಯಲ್ಲಿ ಆಗಾಗ ತೆಗೆದು ನೋಡುತ್ತಿರಿ. ನಂತರ ನೆಲ್ಲಿಕಾಯಿಯ ಮೇಲ್ಭಾಗದಲ್ಲಿ ಫೋರ್ಕ್‌ ಅಥವಾ ಕಡ್ಡಿಯಿಂದ ಚುಚ್ಚಿ ಹೋಲ್‌ ಮಾಡಿ ಅಥವಾ ಕಟ್‌ ಮಾಡಬಹುದು. ನಂತರ ಒಂದು ಪಾತ್ರೆಯಲ್ಲಿ ಸಕ್ಕರೆ ಮತ್ತು ನೀರು ಹಾಕಿ ಬಿಸಿ ಮಾಡಿ. ಇದಕ್ಕೆ ಬೇಯಿಸಿದ ಆಮ್ಲಾವನ್ನು ಸೇರಿಸಿ ಮತ್ತು ಸಕ್ಕರೆ ಕರಗುವ ತನಕ ಮಿಶ್ರಣ ಮಾಡಿ. ಸಕ್ಕರೆ ಕರಗಿದ ನಂತರ ಉಪ್ಪು, ನಿಂಬೆ ರಸ, ಏಲಕ್ಕಿ ಪುಡಿ ಸೇರಿಸಿ 10 ನಿಮಿಷ ಬೇಯಿಸಿ.

ಸಕ್ಕರೆ ಮಿಶ್ರಣವು ಡಾರ್ಕ್ ಕಲರ್ ಆಗುವವರೆಗೆ ಇನ್ನೊಂದು 10 ನಿಮಿಷ ಬೇಯಿಸಿ. ಹೀಗೆ ಮಾಡುವುದರಿಂದ ಸಕ್ಕರೆ ಮಿಶ್ರಣದ ಜೊತೆಗೆ ನೆಲ್ಲಿಕಾಯಿಯ ಬಣ್ಣವೂ ಬದಲಾಗುತ್ತದೆ. ನಂತರ ಒಲೆ ಆಫ್ ಮಾಡಿ ಮತ್ತು ಅದನ್ನು ಮುಚ್ಚಿ ಮತ್ತು ಇಡೀ ದಿನ ಬಿಡಿ. ನಂತರ ಈ ಮಿಶ್ರಣವನ್ನು ಒಂದು ಗಾಜಿನ ಬಾಟಲಿ ಶೇಖರಿಸಿಡಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!