ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಗ್ನಿ ಅವಘಡದಲ್ಲಿ 36 ಇ-ಬೈಕ್ಗಳು ಸುಟ್ಟು ಕರಕಲಾಗಿರುವ ಗಟನೆ ಆಂಧ್ರಪ್ರದೇಶದ ಪಾರ್ವತಿಪುರಂ ಜಿಲ್ಲೆಯ ಪಾಲಕೊಂಡ ಪಟ್ಟಣದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಸ್ಥಳೀಯವಾಗಿ ಮನಂ ಮೋಟಾರ್ಸ್ ಎಂಬ ಇ-ಬೈಕ್ ಶೋರೂಮ್ ಇದೆ. ದೀಪಾವಳಿ ವಿಶೇಷ ಮಾರಾಟದ ಸಂದರ್ಭದಲ್ಲಿ ಸುಮಾರು 36 ಇ-ಬೈಕ್ಗಳು ಮತ್ತು ಬ್ಯಾಟರಿಗಳನ್ನು ಮಾರಾಟಕ್ಕೆ ಸಿದ್ಧಪಡಿಸಲಾಗಿತ್ತು.
ಆದರೆ, ಸೋಮವಾರ ಮುಂಜಾನೆ ಶೋ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಅವಘಡದಲ್ಲಿ ಬೈಕ್ಗಳು, ಬ್ಯಾಟರಿಗಳು ಸುಟ್ಟು ಕರಕಲಾಗಿವೆ. ಬೆಂಕಿಯ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಅಪಘಾತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಅಧಿಕಾರಿಗಳು ತಿಳಿಸಿದರು.
ಈ ಘಟನೆಯಲ್ಲಿ ಸುಟ್ಟು ಭಸ್ಮವಾಗಿರುವ ಬೈಕ್ ಹಾಗೂ ಇತರೆ ವಸ್ತುಗಳ ಒಟ್ಟು ಮೌಲ್ಯ ಸುಮಾರು 50 ಲಕ್ಷ ರೂಪಾಯಿ ಎಂದು ಶೋ ರೂಂ ನಿರ್ವಾಹಕರು ತಿಳಿಸಿದ್ದಾರೆ.