ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲೆಗೆ ಹೋಗುತ್ತಿದ್ದ ಬಾಲಕಿಗೆ ಐಟಂ ಎನ್ನುವ ಪದಬಳಕೆ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಉದ್ಯಮಿಯೊಬ್ಬರಿಗೆ 18 ತಿಂಗಳ ಜೈಲು ಶಿಕ್ಷೆ ನೀಡಲಾಗಿದೆ.
25 ವರ್ಷದ ಉದ್ಯಮಿಗೆ ಮುಂಬೈ ವಿಶೇಷ ಪೋಕ್ಸೊ ನ್ಯಾಯಾಲಯ ಒಂದುವರೆ ವರ್ಷದ ಜೈಲು ಶಿಕ್ಷೆ ನೀಡಿದೆ. 2015 ರಲ್ಲಿ ಬಾಲಕಿ ಶಾಲೆಗೆ ಹೋಗುವಾಗ ಆಕೆಯ ಕೂದಲು ಎಳೆದು ‘ಕ್ಯಾ ಐಟಂ ಕಿದರ್ ಜಾ ರಹೇ ಹೊ’ ಎಂದು ಕೇಳಿದ್ದಾನೆ.
ಈ ಪದವನ್ನು ಹುಡುಗಿಯರನ್ನು ಅವಹೇಳನಕಾರಿ ರೀತಿಯಲ್ಲಿ ಸಂಭೋದಿಸಲು ಬಳಸಲಾಗುತ್ತದೆ. ಏಕೆಂದರೆ ಇದು ಅವರನ್ನು ಲೈಂಗಿಕ ರೀತಿಯಲ್ಲಿ ವಸ್ತುನಿಷ್ಠಗೊಳಿಸುತ್ತದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.