ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬ ಬಂತೆಂದರೆ ಸಾಕು, ಬೆಂಗಳೂರಿನ ಈ ಅಂಗಡಿ ಮುಂದೆ ಜನರ ಕ್ಯೂ ಕಾಣುತ್ತದೆ.
ಅವೆನ್ಯೂ ರಸ್ತೆಯಲ್ಲಿರುವ ಈ ಪುಟ್ಟ ಅಂಗಡಿ ಮಂದೆ ಲೆಕ್ಕದ ಪುಸ್ತಕ ಖರೀದಿ ಮಾಡೋಕೆ ಜನ ಮುಗಿಬೀಳುತ್ತಾರೆ.
ಷಾ ಜಸ್ ರಾಜ್ ಜೈನ್ ಅಂಗಡಿಯಲ್ಲಿ ಪುಸ್ತಕ ಕೊಂಡು ತಮ್ಮ ಅಂಗಡಿಯಲ್ಲಿ ಆ ಪುಸ್ತಕ ಇಟ್ಟು ಪೂಜೆ ಮಾಡಿದರೆ ಲಕ್ಷ್ಮಿ ದೇವಿ ಒಲಿದು ಚಿನ್ನದ ಹೊಳೆಯೇ ಹರಿಯುತ್ತದೆ ಎನ್ನುವ ನಂಬಿಕೆ ಇದೆ.
ದೊಡ್ಡ ದೊಡ್ಡ ಅಂಗಡಿಗಳು ಮಾಲೀಕರು ಅಂಗಡಿ ಮುಂದೆ ನಿಲ್ಲುತ್ತಾರೆ, ಬಿಸಲು ಮಳೆ ಲೆಕ್ಕಿಸದ ಉದ್ದದ ಕ್ಯೂನಲ್ಲಿ ನಿಲ್ಲುತ್ತಾರೆ. ರಾಹುಕಾಲ, ಗುಳಿಕಕಾಲ ನೋಡಿ ಪುಸ್ತಕ ಕೊಳ್ಳುತ್ತಾರೆ.
ಇದು ಬಹಳಷ್ಟು ವರ್ಷದಿಂದ ನಡೆದು ಬಂದಿರುವ ಸಂಪ್ರದಾಯ ಒಟ್ಟಾರೆ ಆರು ಸಾವಿರಕ್ಕೂ ಹೆಚ್ಚು ಪುಸ್ತಕ ಮಾರಾಟವಾಗಿದೆ. ಎಲ್ಲ ಲೆಕ್ಕ ಕಂಪ್ಯೂಟರ್‌ನಲ್ಲೇ ಮಾಡಿದರೂ ಇಲ್ಲಿ ಪುಸ್ತಕ ಕೊಳ್ಳುವವರ ಸಂಖ್ಯೆ ಕಡಿಮೆ ಇಲ್ಲ. ದಸರಾದಿಂದ ದೀಪಾವಳಿವರೆಗೂ ಜನ ಪುಸ್ತಕ ಕೊಳ್ಳುತ್ತಾರೆ ಎಂದು ಅಂಗಡಿ ಮಾಲೀಕ ಉತ್ತಮ್ ಚಂದ್ ಹೇಳಿದ್ದಾರೆ.