Friday, November 28, 2025

ಶತಕದ ಅಂಚಿನತ್ತ ಕೆಂಪು ಸುಂದರಿ, ಟೊಮ್ಯಾಟೊ ಬಾತ್‌, ಟೊಮ್ಯಾಟೊ ಗೊಜ್ಜು ಮರೆತುಬಿಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಾರುಕಟ್ಟೆಯಲ್ಲಿ ಕೆಂಪು ಸುಂದರಿ ಟೊಮೆಟೊ ಬೆಲೆ ಮತ್ತೆ ಏರಿಕೆಯಾಗಿದೆ. ಇದರಿಂದ ರೈತರು ಖುಷ್‌ ಆಗಿದ್ದರೇ, ಗ್ರಾಹಕರಿಗೆ ಜೇಬಿಗೆ ಕತ್ತರಿ ಬೀಳುತ್ತೆ ಅನ್ನೋದು ಚಿಂತೆಯಾಗಿದೆ. ಹೌದು. ಕಳೆದ ತಿಂಗಳು 10-20 ರೂ. ಗಳಷ್ಟಿದ್ದ ಕೆ.ಜಿ ಟೊಮೆಟೊ ಬೆಲೆ ದಿಢೀರ್‌ ಏರಿಕೆಯಾಗಿದೆ. ಟೊಮ್ಯಟೊ ಗೊಜ್ಜು ಹಾಗೂ ಟೊಮ್ಯಾಟೊ ಬಾತ್‌ಗಳನ್ನು ಮರೆಯಬೇಕಾದ ಪರಿಸ್ಥಿತಿ ಎದುರಾಗಿದೆ.

ಕಳೆದ 8-10 ದಿನಗಳಲ್ಲಿ ಟೊಮೆಟೊ ಬೆಲೆ ಏರಿಕೆ ಕಂಡಿದ್ದು, 80 ರಿಂದ 90 ರೂ. ಅಂಚಿಗೆ ತಲುಪಿದೆ. ಇದು ಶೀಘ್ರವೇ ಶತಕ ಮುಟ್ಟಲಿದೆ ಎಂಬ ಮಾತು ತರಕಾರಿ ಮಾರಾಟಗಾರರಿಂದ ಕೇಳಿ ಬರುತ್ತಿದೆ.

2 ತಿಂಗಳ ಹಿಂದೆ ಟೊಮೆಟೊ ಬೆಲೆ ಕುಸಿತ ಉಂಟಾಗಿ ರಸ್ತೆಗೆ ಹಾಕಿದ್ದ ಬೆಳೆಗಾರರಿಗೆ ಎರಡು ತಿಂಗಳ ಅಂತರದಲ್ಲಿ ಲಾಭ ಹುಡುಕಿಕೊಂಡು ಬರುತ್ತಿದೆ. ಮನೆಯಲ್ಲಿನ ಅಡುಗೆಯಲ್ಲಿ ಟೊಮೆಟೊ ತನ್ನದೆಯಾದ ಸ್ಥಾನ ಪಡೆದು, ಮುಖ್ಯ ಸಾಮಗ್ರಿಯಾಗಿದೆ. ದಿಢೀರ್‌ ದರ ಏರಿಕೆಯಿಂದ ಕೆ.ಜಿ. ತೆಗೆದುಕೊಂಡು ಹೋಗುವವರು ಅರ್ಧ ಕೆ.ಜಿ.ಗೆ ಇಳಿಕೆ ಕಂಡಿದ್ದಾರೆ.

ಬೆಂಗಳೂರು ನಗರದಲ್ಲಿ ಕಳೆದ 8-10 ದಿನಗಳಿಂದ ಟೊಮೆಟೊ ಬೆಲೆ ಏರಿಕೆ ಆಗಿದೆ. ಹಾಪ್‌ ಕಾಮ್ಸ್‌ಗಳಲ್ಲಿ ಉತ್ತಮ ದರ್ಜೆಯ ಟೊಮೆಟೊ ಪ್ರತಿ ಕೆಜಿಗೆ 80 ರೂ. ತಲುಪಿದ್ದರೆ, ತಳ್ಳು ಗಾಡಿ ವ್ಯಾಪಾರಿಗಳು 90 ರೂ.ಗೆ ಮಾರಾಟ ಮಾಡ್ತಿದ್ದಾರೆ.

error: Content is protected !!