ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಅಭಿನಯದ ಕಾಂತಾರ ಚಿತ್ರಕ್ಕೆ ಉತ್ತಮ ಪ್ರಶಂಸೆ ಸಿಕ್ಕಿದೆ. ಸಿನಿಮಾ ನೋಡಿದ ಪ್ರೇಕ್ಷಕರ ಜೊತೆಗೆ ಚಿತ್ರರಂಗದ ಗಣ್ಯರು, ರಾಜಕೀಯ ಗಣ್ಯರು ಕೂಡ ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ ಬುಟ್ಟಬೊಮ್ಮ ಪೂಜಾ ಹೆಗ್ಡೆ ಕೂಡಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಸಿನಿಮಾದ ಬಗ್ಗೆ ಕಮೆಂಟ್ ಮಾಡಿದ್ದಾರೆ. ಕಾಂತಾರ ಸಿನಿಮಾ ನೋಡಿದ ಪೂಜಾ ಹೆಗಡೆ, “ನಿಮಗೆ ಗೊತ್ತಿದ್ದನ್ನು ಕಥೆಯಾಗಿ ಬರೆಯಿರಿ. ನೀವು ಇಷ್ಟಪಡುವ ಮತ್ತು ನಿಮ್ಮ ಹೃದಯದಿಂದ ಬರುವ ಕಥೆಗಳನ್ನು ಹೇಳಿ. ಕಾಂತಾರ ಕೊನೆಯ 20 ನಿಮಿಷಗಳು ರೋಮಾಂಚನವಾಗುವಂತೆ ಇದೆ. ದೃಶ್ಯಗಳು, ಅವರ ಅಭಿನಯ ತುಂಬಾ ಅದ್ಭುತವಾಗಿದೆ. ರಿಷಬ್ ಶೆಟ್ಟಿಯವರ ಕಾಂತಾರ ಇಷ್ಟು ದೊಡ್ಡ ಯಶಸ್ಸು ಕಂಡಿದ್ದಕ್ಕೆ ಹೆಮ್ಮೆಯಾಗುತ್ತಿದೆ.
ನಾನು ಬಾಲ್ಯದಲ್ಲಿ ನೋಡಿದ ಭೂತಕೋಲದ ಕುಣಿತಗಳನ್ನು ಈ ಸಿನಿಮಾದಲ್ಲಿ ಚೆನ್ನಾಗಿ ತೋರಿಸಿ ದೊಡ್ಡ ಹಿಟ್ ಮಾಡಿದ್ದೀರಿ. ಮುಂದಿನ ದಿನಗಳಲ್ಲಿ ನೀವು ಇನ್ನಷ್ಟು ಯಶಸ್ಸು ಗಳಿಸಬೇಕು,” ಎಂದು ರಿಷಬ್ ಶೆಟ್ಟಿಯನ್ನು ಅಭಿನಂದಿಸಿದರು.