ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಯಗೊಂಡ ಬಾಲಕಿಯೊಬ್ಬಳು ಸಹಾಯಕ್ಕೆ ಕೈಚಾಚುತ್ತಿದ್ದು, ಸುತ್ತುವರಿದಿದ್ದ ಒಬ್ಬರೂ ಆಕೆಗೆ ಸಹಾಯ ಮಾಡದೇ ವಿಡಿಯೋ ಮಾಡುವುದರಲ್ಲಿ ನಿರತರಾಗಿದ್ದಾರೆ.
ಈ ಅಮಾನವೀಯತೆ ನಡೆದಿದ್ದು ಉತ್ತರಪ್ರದೇಶದ ಕನೌಜ್‌ನಲ್ಲಿ. ಬಾಲಕಿ ಭಾನುವಾರ ನಾಪತ್ತೆಯಾಗಿದ್ದಳು. ಹಲವು ಗಂಟೆಗಳ ನಂತರ ತಲೆಯಿಂದ ಕಾಲಿನವರೆಗೂ ಗಾಯಗೊಂಡಿದ್ದು, ರಕ್ತ ಸೋರುತ್ತಿದೆ. ಈಕೆಯನ್ನು ನೋಡಿದ ಜನ ತಕ್ಷಣ ಮೊಬೈಲ್ ತೆಗೆದು ವಿಡಿಯೋ ಮಾಡಿಕೊಳ್ಳಲು ಆರಂಭಿಸಿದ್ದಾರೆ.
वीडियो कन्नौज के गुरसहायगंज से है। रविवार को पीडब्ल्यूडी के डाक बंगले में 10 साल की एक बच्ची खून से लथपथ मिली। उसके चेहरे को ईंट-पत्थर से बुरी तरह कुचल दिया गया था। मजमा मदद के बजाए उसका वीडियो बनाने लगा। बच्ची मदद मांगती रही। तमाशबीन डटे रहे। #kannauj@kannaujpolice @Uppolice pic.twitter.com/l7FD0YUgZf
— Tariq Iqbal (@tariq_iqbal) October 23, 2022
ಸುತ್ತ ಅಷ್ಟು ಜನರಿದ್ದರೂ ಒಬ್ಬರೂ ಆಕೆಗೆ ಸಹಾಯ ಮಾಡಿಲ್ಲ. ಆಸ್ಪತ್ರೆಗೆ ಸೇರಿಸಲು ಮುಂದಾಗಿಲ್ಲ. ಏನಾಗಿದೆಯೋ ಏನು ನಮಗೇಕೆ ಬೇಕು ಎನ್ನುವಂತೆ ಸುಮ್ಮನೆ ನಿಂತಿದ್ದಾರೆ. ಒಬ್ಬರಿಬ್ಬರು ಪೊಲೀಸರಿಗೆ ಫೋನ್ ಮಾಡಿ ಎಂದು ಹೇಳುವುದು ಕೇಳುತ್ತದೆ.
ನಂತರ ಪೊಲೀಸ್ ಔಟ್‌ಪೋಸ್ಟ್ ಇನ್‌ಚಾರ್ಜ್ ಸ್ಥಳಕ್ಕೆ ಆಗಮಿಸಿ, ಹುಡುಗಿಯನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ಆಟೋ ರಿಕ್ಷಾ ಕಡೆ ಧಾವಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
A minor girl was found lying in a pool of blood behind a guest house in #Kannauj . While locals were busy clicking photos, instead of helping her, a Policeman who reached the sport, took her in his arms and ran towards a nearby hospital to save her. pic.twitter.com/AtqRxQpSin
— Sanjay (@sanjaykumarpv) October 25, 2022