ಅರುಣಾಚಲ ಪ್ರದೇಶದಲ್ಲಿ ಭೀಕರ ಅಗ್ನಿ ಅವಘಡ:700 ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಬೂದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಂಗಳವಾರ ಬೆಳಗ್ಗೆ ಅರುಣಾಚಲ ಪ್ರದೇಶದ ಇಟಾನಗರ ಸಮೀಪದ ನಹರ್ಲಗುನ್ ಡೈಲಿ ಮಾರ್ಕೆಟ್‌ನಲ್ಲಿ ಸಂಭವಿಸಿದ ಭಾರಿ ಬೆಂಕಿಯಲ್ಲಿ ಸುಮಾರು 700 ಅಂಗಡಿಗಳು ಬೂದಿಯಾಗಿರುವ ಘಟನೆ ನಡೆದಿದೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ಇದ್ದಕ್ಕಿದ್ದಂತೆ ವ್ಯಾಪಕವಾಗಿ ವ್ಯಾಪಿಸಿದೆ. ಸದ್ಯ ದುರಂತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದೀಪಾವಳಿ ಆಚರಣೆಗಾಗಿ ಪಟಾಕಿ ಸಂಗ್ರಹಿಸಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಅಗ್ನಿಶಾಮಕ ದಳದವರು ತಕ್ಷಣ ಕಾರ್ಯಪ್ರವೃತ್ತರಾದರೂ ಸಹ ಬಿದಿರು ಮತ್ತು ಮರದಿಂದ ಮಾಡಲ್ಪಟ್ ಒಣ ವಸ್ತುಗಳಿಂದ ಮಾಡಲ್ಪಟ್ಟ ಅಂಗಡಿಗಳು ಮಾರುಕಟ್ಟೆಯಲ್ಲಿ ಹೇರಳವಾಗಿ ಇದ್ದುದರಿಂದ ಬೆಂಕಿ ವೇಗವಾಗಿ ಹರಡಿದೆ ಎಂದು ಮಾಹಿತಿ ನೀಡಿದರು. ಬೆಂಕಿಯಿಂದ ಉಂಟಾದ ಹಾನಿ ಸುಮಾರು ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಅಗ್ನಿಶಾಮಕ ಇಲಾಖೆಯಿಂದ ತನಿಖೆ ಪೂರ್ಣಗೊಂಡ ನಂತರ ಬೆಂಕಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿಮ್ಮಿ ಚಿರಂ ಹೇಳಿದ್ದಾರೆ. ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿ ಪಕ್ಕದ ಅಗ್ನಿಶಾಮಕ ಠಾಣೆಗೆ ದೌಡಾಯಿಸಿದರೂ ಸಿಬ್ಬಂದಿ ಸರಿಯಾದ ಸಮಯಕ್ಕೆ ಬರಲಿಲ್ಲ ಎಂದು ಅಂಗಡಿ ಮಾಲೀಕರು ಆರೋಪಿಸಿದ್ದಾರೆ. ಜೊತೆಗೆ ಅಗ್ನಿಶಾಮಕ ವಾಹನಗಳಲ್ಲಿ ನೀರು ಇರಲಿಲ್ಲ.
ಭರ್ತಿ ಮಾಡಲು, ಸಿಬ್ಬಂದಿ ಬಹಳ ದೂರ ಪ್ರಯಾಣಿಸಬೇಕಾಗಿತ್ತು ಅವರು ಬರುವಷ್ಟರಲ್ಲಿ ಮಾರುಕಟ್ಟೆಯ ಬಹುಭಾಗ ಅಗ್ನಿಗಾಹುತಿಯಾಗಿತ್ತು ಎಂದು ದೂರಿದರು.

ಪೊಲೀಸರೂ ಯಾವುದೇ ಕ್ರಮಕೈಗೊಂಡಿಲ್ಲ, ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿರುವ ಇವರೆಲ್ಲರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ನಹರ್ಲಗುನ್ ಬಜಾರ್ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕಿಪಾ ನೈ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!