ಡ್ರೈ ಶಾಂಪೂವಿನಲ್ಲಿ ಕ್ಯಾನ್ಸರ್‌ಕಾರಕ ಪತ್ತೆ, ಜನಪ್ರಿಯ ಶಾಂಪೂಗಳನ್ನು ಹಿಂಪಡೆದ ಯೂನಿಲಿವರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾಂಪೂವಿನಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಯೂನಿಲಿವರ್ ಪಿಎಲ್‌ಸಿಯು ಕಂಪನಿಯು ಡವ್ ಸೇರಿದಂತೆ ಇತರೆ ಡ್ರೈ ಶಾಂಪೂಗಳ ಜನಪ್ರಿಯ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆದಿದೆ.

ಶಾಂಪೂಗಳಲ್ಲಿ ಬೆಂಜೀನ್ ಎನ್ನುವ ಕ್ಯಾನ್ಸರ್‌ಕಾರಕ ಅಂಶ ಕಾಣಿಸಿದ್ದು, ಮಾನವ ದೇಹವನ್ನು ಹಲವು ರೀತಿಯಲ್ಲಿ ಪ್ರವೇಶಿಸುವ ಅಪಾಯವಿದೆ ಎನ್ನಲಾಗಿದೆ. ಮೂಗು, ಬಾಯಿ ಮತ್ತು ಚರ್ಮದ ಮೂಲಕ ದೇಹವನ್ನು ಕ್ಯಾನ್ಸರ್‌ಕಾರಕ ಅಂಶ ಪ್ರವೇಶಿಸಬಹುದಾಗಿದೆ. ಇದು ರಕ್ತದ ಕ್ಯಾನ್ಸರ್‌ಗೆ ಕಾರಣವಾಗಬಹುದು.

ಈ ಉತ್ಪನ್ನಗಳ ಬಳಕೆ ನಿಲ್ಲಿಸಬೇಕು, ಈಗಾಗಲೇ ಇದನ್ನು ಕೊಂಡವರು ಹಣ ಮರಳಿ ಪಡೆಯಲು ಯುನಿಲಿವರ್ ರಿಕಾಲ್ ವೆಬ್‌ಗೆ ಭೇಟಿ ನೀಡಬೇಕು ಎಂದು ಎಫ್‌ಡಿಎ ಹೇಳಿದೆ. ಈ ಬಗ್ಗೆ ಯೂನಿಲಿವರ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಯುನಿಲಿವರ್‌ನಲ್ಲಿ ನೆಕ್ಸಸ್, ಸಾವೆ, ಟ್ರೆಸೆಮೆ ಹಾಗೂ ತಿಗಿ ರೀತಿಯ ಬ್ರ್ಯಾಂಡ್ಗಳನ್ನು ಒಳಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!