ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಕೊಯಮತ್ತೂರು ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ, ಇದೊಂದು ಆತ್ಮಹತ್ಯೆ ಬಾಂಬ್ ದಾಳಿ ಮಾದರಿ ಶಂಕೆ ಇದೆ ಎಂದಿದ್ದಾರೆ.
ಪ್ರಕರಣದ ಹಿಂದೆ ಐಸಿಸ್ ಸಂಘಟನೆಯ ಕೈವಾಡ ಇರುವ ಶಂಕೆ ಇದೆ. ಕೊಯಮುತ್ತೂರು ಸಿಲಿಂಡರ್ ಸ್ಪೋಟ ಒಂದು ಆತ್ಮಹತ್ಯೆ ಮಾದರಿಯಲ್ಲಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಪೋಟದ ವೇಳೆ ಜಮೇಶ್ ಮೊಬಿನ್ ಮೃತಪಟ್ಟಿದ್ದಾನೆ. ಮೃತನ ಮನೆಯಲ್ಲಿ ಸ್ಪೋಟಕ ವಸ್ತುಗಳು ಪತ್ತೆಯಾಗಿವೆ. 50 ಕೆಜಿ ಅಮೋನಿಯಂ ನೈಟ್ರೇಟ್, ಪೊಟಾಷಿಯಂ, ಸೋಡಿಯಂ ಫ್ಯೂಸ್ ವೈರ್, ಸೇರಿದಂತೆ ವಿವಿಧ ಸ್ಪೋಟಕ ವಸ್ತುಗಳು ಪತ್ತೆಯಾಗಿವೆ. ಆದರೆ, ಪತ್ತೆ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿಲ್ಲ ಎಂದು ಅಣ್ಣಾಮಲೈ ಆರೋಪಿಸಿದ್ದಾರೆ.