ಹೊಸದಿಗಂತ ಡಿಜಿಟಲ್ ಡೆಸ್ಕ್:
2022ರ ವರ್ಷದ ಕೊನೆಯ ಸೂರ್ಯಗ್ರಹಣವು ಮಂಗಳವಾರ ಸಂಭವಿಸಿದ್ದು, ಗ್ರಹಣದ ಬಳಿಕ ರಾಜ್ಯದ ವಿವಿಧ ದೇವಾಲಯಗಳಲ್ಲಿ ಗ್ರಹಣದ ದೋಷ ನಿವಾರಣೆಗಾಗಿ ಶುದ್ಧಿ ಕಾರ್ಯವನ್ನು ನಡೆಸಲಾಯಿತು.
ಪುರಾಣ ಪ್ರಸಿದ್ಧ, ಆಸ್ತಿಕರ ಬಹು ನಂಬಿಕೆಯ ಪುಣ್ಯ ಕ್ಷೇತ್ರವಾದ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಗ್ರಹಣದ ಸಂದರ್ಭ ಶ್ರೀ ದೇವರ ಮೂಲ ಬಿಂಬಕ್ಕೆ ಅಭಿಷೇಕ ನಡೆಯಿತು.