Friday, November 28, 2025

CINE | ಡಿಜಿಟಲ್ ವೇದಿಕೆಯಲ್ಲೂ ದಾಖಲೆ ಬರಿತಿದೆ ‘ಕಾಂತಾರ–1’: ಕಲೆಕ್ಷನ್‌ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರಮಂದಿರಗಳಲ್ಲಿನ ರೋಚಕ ಯಶಸ್ಸಿನ ಬಳಿಕ, ಕಾಂತಾರ ಅಧ್ಯಾಯ 1 ಡಿಜಿಟಲ್ ಪ್ರದರ್ಶನದಲ್ಲೂ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದೆ. ರಿಷಬ್ ಶೆಟ್ಟಿಯ ನಟನೆಯೂ ನಿರ್ದೇಶನವೂ ಆಗಿರುವ ಈ ಸಿನಿಮಾ, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಡಿಜಿಟಲ್ ವೇದಿಕೆಯಲ್ಲಿ 22.54 ಕೋಟಿ ರೂಪಾಯಿಗೂ ಅಧಿಕ ಸಂಗ್ರಹ ಸಾಧಿಸಿರುವುದು ಚಿತ್ರರಂಗದಲ್ಲಿ ವಿಶೇಷ ಗಮನ ಸೆಳೆದಿದೆ.

ಕನ್ನಡ ಭಾಷೆಯಲ್ಲೇ ಸುಮಾರು 7 ಕೋಟಿ ರೂಪಾಯಿ ಗಳಿಕೆಯಾಗಿದೆ. ಹಿಂದಿ ಭಾಷಾಂತರ ಆವೃತ್ತಿಯಲ್ಲಿ 13.32 ಕೋಟಿ ರೂಪಾಯಿ ಹಾಗೂ ತಮಿಳಿನಲ್ಲಿ 1.64 ಕೋಟಿ ರೂಪಾಯಿ ಗಳಿಕೆ ದಾಖಲಾಗಿರುವುದು ಚಿತ್ರದ ಬಹುಭಾಷಾ ಜನಪ್ರಿಯತೆಯನ್ನು ಸ್ಪಷ್ಟಪಡಿಸುತ್ತದೆ.

ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರಿದಿರುವ ಈ ಹೊತ್ತಲ್ಲಿಯೇ ಡಿಜಿಟಲ್ ವೇದಿಕೆಯಲ್ಲೂ ಪ್ರೇಕ್ಷಕರು ಚಿತ್ರವನ್ನು ಮತ್ತೆ ಮತ್ತೆ ವೀಕ್ಷಿಸುತ್ತಿದ್ದಾರೆ ಎನ್ನುವುದು ನಿರ್ಮಾಪಕರಿಗೆ ಹೊಸ ಉತ್ಸಾಹ ನೀಡಿದೆ. ಚಿತ್ರಮಂದಿರ ಮತ್ತು ಡಿಜಿಟಲ್ ಎರಡನ್ನೂ ಸೇರಿಸಿ, ವಿಶ್ವಾದ್ಯಂತ ಚಿತ್ರದ ಒಟ್ಟು ಗಳಿಕೆ 880 ಕೋಟಿ ರೂಪಾಯಿ ದಾಟಿದೆ ಎಂದು ಮೂಲಗಳು ತಿಳಿಸಿವೆ.

error: Content is protected !!