Friday, November 28, 2025

ಇಂದಿನಿಂದ ಡಿಸೆಂಬರ್ 7ರವರೆಗೆ ಕಬ್ಬನ್ ಪಾರ್ಕ್‌ನಲ್ಲಿ ಫ್ಲವರ್ ಶೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರತಿ ವರ್ಷ ಲಾಲ್ಬಾಗ್ ಫಲ ಪುಷ್ಪ ಪ್ರದರ್ಶನಕ್ಕೆ ಜನರು ಬಂದು ಕಣ್ತುತುಂಬಿಕೊಳ್ಳುತ್ತಾರೆ. ಇದೇ ಮಾದರಿಯಲ್ಲಿ ಇಂದಿನಿಂದ (ನ.27) ಕಬ್ಬನ್ ಪಾರ್ಕ್ನಲ್ಲಿಯೂ ಪುಷ್ಪ ಮೇಳಕ್ಕೆ ತೋಟಗಾರಿಕೆ ಇಲಾಖೆ ಚಾಲನೆ ನೀಡಲಿದೆ.

ಕನ್ನಡ ರಾಜ್ಯೋತ್ಸವ ಹಾಗೂ‌ ಮಕ್ಕಳ ದಿನಾಚರಣೆ ಅಂಗವಾಗಿ ಹತ್ತು ವರ್ಷಗಳ ಬಳಿಕ ಫ್ಲವರ್ ಶೋ ನಡೆಯುತ್ತಿದ್ದು, ಡಿಸೆಂಬರ್ 7ರ ವರೆಗೂ ಪುಷ್ಪ ಪ್ರದರ್ಶನ ಮುಂದುವರೆಯಲಿದೆ.

ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ಅಂಗವಾಗಿ ತೋಟಗಾರಿಕೆ ಇಲಾಖೆ ಲಾಲ್ಬಾಗ್​ನಲ್ಲಿ ಮಾತ್ರ ಫಲಪುಷ್ಪ ಪ್ರದರ್ಶನ ಆಯೋಜಿಸುತ್ತಿತ್ತು ಈಗ ಕಬ್ಬನ್ ಉದ್ದಾನದಲ್ಲಿ ರಾಜೋತ್ಸವ, ಮಕ್ಕಳ ದಿನಾಚರಣೆ ಅಂಗವಾಗಿ ಶೋ ಆಯೋಜನೆ ಮಾಡಿದೆ. ಸರ್ಕಾರಿ‌ ಶಾಲೆ ಮಕ್ಕಳಿಗೆ ಉಚಿತ ಪ್ರವೇಶ ಇದ್ದು, ದೊಡ್ಡವರಿಗೆ 30 ರೂ. ಹಾಗೂ ಮಕ್ಕಳಿಗೆ 10 ರೂ. ಶುಲ್ಕದ ಟಿಕೆಟ್ ನಿಗದಿಸಲಾಗಿದೆ.

ಇಲಾಖೆ ಪುಷ್ಪ ಪ್ರದರ್ಶನದ ಜೊತೆಗೆ ಕಲಾ, ಸಂಸ್ಕೃತಿ ಹಬ್ಬವನ್ನೂ ಸಹ ಹಮ್ಮಿಕೊಳ್ಳಲಿದ್ದು, ಆಲಂಕಾರಿಕ ಕುಂಡಗಳನ್ನೂ ಸಿದ್ಧ ಮಾಡಿಕೊಂಡಿದೆ. ಪುಷ್ಪಗಳಲ್ಲಿ ಪ್ರಾಣಿಗಳ ಕರಕುಶಲಗಳನ್ನು ರಚಿಸಿ ಮಕ್ಕಳನ್ನು ಆಕರ್ಷಿಸುವ ಯೋಜನೆ ರೂಪಿಸಲಾಗಿದೆ. ಕಬ್ಬನ್ ಪಾರ್ಕ್​ನ ಬ್ಯಾಂಡ್ ಸ್ಟ್ಯಾಂಡ್ ಹತ್ತಿರ 20 ರಿಂದ 25 ಸಾವಿರ ಕುಂಡಗಳನ್ನು ಇಡಲು ಪ್ಲಾನ್ ಮಾಡಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನ ಇರಲಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕಿ ಕುಸುಮಾ ಹೇಳಿದ್ದಾರೆ.

error: Content is protected !!