Friday, November 28, 2025

ಗಡಿಯಲ್ಲಿ ಭಾರತಕ್ಕೆ ಒಳನುಸುಳುತ್ತಿದ್ದ ಪಾಕ್‌ ಪ್ರಜೆ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಗಡಿಯಲ್ಲಿ ಭಾರತಕ್ಕೆ ಒಳನುಸುಳುತ್ತಿದ್ದ ಪಾಕಿಸ್ತಾನ ಪ್ರಜೆಯನ್ನು ಬಿಎಸ್‌ಎಫ್‌ ಸಿಬ್ಬಂದಿ ಬಂಧಿಸಿದ್ದಾರೆ.

ಪಾಕ್‌ ಪ್ರಜೆ ಕತ್ತಲೆ ಸಮಯದಲ್ಲಿ ಗಡಿ ದಾಟಿ ದನದ ಕೊಟ್ಟಿಗೆಯೊಳಗೆ ಅಡಗಿಕೊಂಡು ಬಿಎಸ್‌ಎಫ್‌ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾನೆ. ಬಿಎಸ್‌ಎಫ್ ಆತನನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದೆ. ಆರಂಭಿಕ ವಿಚಾರಣೆಯ ಸಮಯದಲ್ಲಿ ಅವನ ಬಳಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ. ಆದಾಗ್ಯೂ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಹೆಚ್ಚಿನ ತನಿಖೆ ನಡೆಸಿದ್ದಾರೆ. 

ಹಿಂದಾಲ್‌ (24) ಬಂಧಿತ ಆರೋಪಿ. ಈತ ಪಾಕಿಸ್ತಾನದ ಮಿಥಿ ಜಿಲ್ಲೆಯ ಛಚ್ರೊ ತೆಹ್ಸಿಲ್‌ನ ನಯತಾಲಾ ನಿವಾಸಿ. ಗಡಿ ದಾಟಿ ಭಾರತಕ್ಕೆ ಏಕೆ ಪ್ರವೇಶಿಸಿದ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!