February 18, 2026
Wednesday, February 18, 2026
spot_img

ಇದು ದೀದಿ ಸರಕಾರದ ಬಜೆಟ್: ಮಹಿಳೆಯರಿಗೆ ಮಾಸಿಕ ಭತ್ಯೆ 1,500 ರೂ.ಗೆ ಹೆಚ್ಚಳ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬರುವ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೇರಲು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಗುರುವಾರ ಬಜೆಟ್ ಮಂಡಿಸಿದ್ದು, ಮಹಿಳೆಯರಿಗೆ ಮಾಸಿಕ ಭತ್ಯೆಯನ್ನು 500 ರೂ. ಹೆಚ್ಚಿಸುವುದಾಗಿ ಘೋಷಿಸಿದೆ.

ರಾಜ್ಯ ಹಣಕಾಸು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು ಇಂದುವಿಧಾನಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಮಂಡಿಸಿದರು. ಒಟ್ಟು 4.06 ಲಕ್ಷ ಕೋಟಿ ರೂ.ಗಳ ಈ ಮಧ್ಯಂತರ ಬಜೆಟ್ ನಲ್ಲಿ ಹಲವು ಘೋಷಣೆಗಳನ್ನು ಮಾಡಿದೆ.

ಜನಪ್ರಿಯ ಯೋಜನೆಗಳಲ್ಲಿ ಒಂದಾದ ಲಕ್ಷ್ಮಿರ್ ಭಂಡಾರ್ ಅಡಿಯಲ್ಲಿ, ಮಹಿಳಾ ಫಲಾನುಭವಿಗಳಿಗೆ ಅಸ್ತಿತ್ವದಲ್ಲಿರುವ 1000 ರೂ. ಮಾಸಿಕ ಭತ್ಯೆಯನ್ನು 1500 ರೂ.ಗಳಿಗೆ ಹೆಚ್ಚಾಗಲಿದೆ. ಎಸ್‌ಸಿ/ಎಸ್‌ಟಿ ವರ್ಗಗಳಿಗೆ ಸೇರಿದ ಮಹಿಳೆಯರ ಭತ್ಯೆಯನ್ನು 1200 ರೂ.ಗಳಿಂದ 1700 ರೂ.ಗಳಿಗೆ ಹೆಚ್ಚಿಸಲಾಗಿದೆ.

‘ಬಾಂಗ್ಲಾರ್ ಯುವ ಸಾಥಿ’ ಯೋಜನೆಯಡಿಯಲ್ಲಿ 21 ರಿಂದ 41 ವರ್ಷ ವಯಸ್ಸಿನ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವವರೆಗೆ ಅಥವಾ ಐದು ವರ್ಷಗಳವರೆಗೆ ಮಾಸಿಕ 1,500 ರೂ. ಭತ್ಯೆಯನ್ನು ನೀಡುವುದಾಗಿಯೂ ಘೋಷಿಸಲಾಗಿದೆ.

ಮತ್ತೆ ಟಿಎಂಸಿ ಸರ್ಕಾರವು ಅಧಿಕಾರಕ್ಕೆ ಬಂದರೆ ಆಗಸ್ಟ್ 15 ರಿಂದ ‘ಬಾಂಗ್ಲಾರ್ ಯುವ ಸಾಥಿ’ ಯೋಜನೆ ಜಾರಿಗೆ ತರಲಿದೆ ಎಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !