Friday, November 28, 2025

ಗದರಿಕೆಗೆ ಬೆಲೆ ತೆತ್ತ ಕುಟುಂಬ: ‘ಕೆಲಸ’ದ ಕಾರಣಕ್ಕೆ ಬದುಕು ಕಳೆದುಕೊಂಡ ಬಾಲಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೌಟುಂಬಿಕ ಒತ್ತಡ ಮತ್ತು ಪೋಷಕರ ಗದರಿಕೆಯಿಂದ ಮನನೊಂದ 16 ವರ್ಷದ ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ದಾವಣಗೆರೆ ನಗರದ ಮಾರ್ಕೆಟ್‌ ಸಮೀಪದ ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ.

ಮೃತ ಬಾಲಕನನ್ನು ದಾವಣಗೆರೆಯ ಚಿಕ್ಕನಹಳ್ಳಿಯ ನಿವಾಸಿ ತರುಣ್ (16) ಎಂದು ಗುರುತಿಸಲಾಗಿದೆ. ತರುಣ್ ಇತ್ತೀಚೆಗೆ ಯಾವುದೇ ಕೆಲಸವಿಲ್ಲದೆ ಮನೆಯಲ್ಲಿರುತ್ತಿದ್ದನು. ಈ ಕಾರಣಕ್ಕಾಗಿ ಪೋಷಕರು, “ಸುಮ್ಮನೆ ಗೆಳೆಯರ ಜೊತೆ ಸೇರಿ ಕೆಟ್ಟ ದಾರಿ ಹಿಡಿಯುವ ಬದಲು ಯಾವುದಾದರೂ ಕೆಲಸಕ್ಕೆ ಹೋಗು” ಎಂದು ಬುದ್ಧಿ ಹೇಳಿ ಗದರಿದ್ದರು ಎನ್ನಲಾಗಿದೆ.

ಪೋಷಕರ ಈ ಮಾತುಗಳಿಂದ ತೀವ್ರವಾಗಿ ಮನನೊಂದ ತರುಣ್, ತಕ್ಷಣವೇ ಮನೆಯಿಂದ ಹೊರಟು ಹೋಗಿದ್ದ. ಆತನಿಗಾಗಿ ರಾತ್ರಿಯಿಡೀ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಆದರೆ, ಬೆಳಗ್ಗೆ ರೈಲು ಹಳಿ ಮೇಲೆ ತರುಣ್ ಅವರ ದೇಹ ರುಂಡ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!