ಹೊಸದಿಗಂತ ಡಿಜಿಟಲ್ ಡೆಸ್ಕ್:
ಎವಿಯಾ ದ್ವೀಪದಲ್ಲಿ ದೋಣಿ ಮುಳುಗಿ ನಾಪತ್ತೆಯಾಗಿದ್ದ ಒಂಬತ್ತು ವಲಸಿಗರನ್ನು ಗ್ರೀಕ್ ಸುರಕ್ಷಿತವಾಗಿ ರಕ್ಷಿಸಿದ್ದು, ಉಳಿದ ನಾಪತ್ತೆಯಾಗಿರುವ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ.
ಎವಿಯಾದ ದಕ್ಷಿಣ ತುದಿಯಲ್ಲಿ ಮುಳುಗಿದ ದೋಣಿಯಲ್ಲಿ ಕನಿಷ್ಠ 68 ವಲಸಿಗರಿದ್ದರು ಎಂದು ಗ್ರೀಕ್ ಕರಾವಳಿ ರಕ್ಷಣಾ ವಕ್ತಾರ ನಿಕೋಸ್ ಕೊಕ್ಕಲಾಸ್ ಹೇಳಿದ್ದಾರೆ.
ಕೋಸ್ಟ್ ಗಾರ್ಡ್ ನೌಕೆ, ಹೆಲಿಕಾಪ್ಟರ್ ಮತ್ತು ಎರಡು ಬೋಟ್ಗಳು ಬೀಸುತ್ತಿರುವ ಗಾಳಿಯ ವಿರುದ್ಧ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಕರಾವಳಿ ಕಾವಲು ಪಡೆ ಹೇಳಿಕೆಯಲ್ಲಿ ತಿಳಿಸಿದೆ.