ಹೊಸದಿಗಂತ ವರದಿ ಜೋಯಿಡಾ:
ತಾಲೂಕಿನ ಉಳವಿ ಗ್ರಾಮ ಪಂಚಾಯತ ವ್ಯಾಪ್ತಿಯ ಶಿವಪುರದ ತೂಗು ಸೇತುವೆ ಮೇಲೆ ಸ್ಥಳೀಯ ಕಿಡಿಗೇಡಿ ಯುವಕರು ಕಾರು ಚಲಾಯಿಸಿ ದುಸ್ಸಾಹಸ ಮಾಡಿದ ಘಟನೆ ನಡೆದಿದೆ.
ನವೆಂಬರ್ 1 ರಂದು ಸ್ಥಳೀಯ ಯುವಕರಿಬ್ಬರು ಮಾರತಿ 800 ಕಾರಿನಲ್ಲಿ ಶಿವಪುರದ ತೂಗು ಸೇತುವೆಯ ಮೂಲಕ ಯಲ್ಲಾಪುರ ಕಡೆಗೆ ಪಾಸಾಗಲು ಪ್ರಯತ್ನಿಸಿದ್ದಾರೆ, ಇದನ್ನು ಗಮನಿಸಿದ ಅಲ್ಲಿಯ ಸ್ಥಳೀಯರು ವಾದಕ್ಕೆ ಇಳಿದಾಗ ಕಾರನ್ನು ಹಿಮ್ಮುಕವಾಗಿ ಕಳಿಸಿ ಬುದ್ದಿವಾದ ಹೇಳಿದರು ಯುವಕರು ವಾದಕ್ಕಿಳಿದ ಘಟನೆ ನಡೆದಿದೆ.
ಇತ್ತಿಚಿಗಷ್ಟೆ ಗುಜರಾತ್ ನಲ್ಲಿ ತೂಗು ಸೇತುವೆ ಮುರಿದು ನೂರಾರು ಜನ ಪ್ರಾಣ ಕಳೆದುಕೊಂಡ ಘಟನೆ ಕಣ್ಣ ಮುಂದೆಯೇ ಇರುವಾಗ, ಈ ರೀತಿ ಹುಚ್ಚಾಟ ನಡೆಸುತ್ತಿರುವ ಯುವಕರ ಕೃತ್ಯಕ್ಕೆ ಸ್ಥಳೀಯರು ಬೇಸರ ವ್ಯೆಕ್ತಪಡಿಸಿದ್ದಾರೆ.
ಶಿವಪುರ ಮತ್ತು ಸ್ಥಳೀಯ ಜನರ ಬಹಳಷ್ಟು ದಿನಗಳ ಕನಸು ಶಿವಪುರದ ತೂಗು ಸೇತುವೆ ಆಗಿದ್ದು, ಸ್ಥಳೀಯ ಶಾಸಕ ಆರ್.ವಿ.ದೇಶಪಾಂಡೆ ಉಸ್ತುವಾರಿಯಲ್ಲಿ ಇಲ್ಲಿ ಸೇತುವೆ ನಿರ್ಮಿಸಲಾಗಿದ್ದು, ಸೇತುವೆ ಹಾಳಾದರೆ,ಅಥವಾ ಏನಾದರೂ ತೊಡಕು ಉಂಟಾದರೆ ಯಾರು ಹೊಣೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.