ಟಾಟಾದ ಏರ್ ಇಂಡಿಯಾದ ಪಾಲಾದ ಏರ್ ಏಷ್ಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏರ್ ಏಷ್ಯಾ ಈಗ ಶೇ. 100 ರಷ್ಟು ಟಾಟಾದ ಏರ್ ಇಂಡಿಯಾದ ಒಡೆತನದಲ್ಲಿದೆ. ಮಲೇಷ್ಯಾ ಮೂಲದಏರ್ ಏಷ್ಯಾ Aviation Group Ltd(AAGL), Capital A ಯ ಏರ್‌ ಲೈನ್ ಗ್ರೂಪ್‌ ನ ಹಿಡುವಳಿ ಕಂಪನಿ, AirAsia India Pvt Ltd(AAIPL) ನಲ್ಲಿ ಉಳಿದಿರುವ ಸಂಪೂರ್ಣ ಪಾಲನ್ನು ಟಾಟಾ ಸನ್ಸ್‌ನ ಏರ್ ಇಂಡಿಯಾ ಲಿಮಿಟೆಡ್‌ ಗೆ ಮಾರಾಟ ಮಾಡಿದೆ.ಈ ಮೂಲಕ ಟಾಟಾದ ಏರ್ ಇಂಡಿಯಾ ಈಗ ಮಾಲೀಕತ್ವವನ್ನು ಹೊಂದಿದೆ.
AirAsia ಭಾರತದಲ್ಲಿ 100% ಪಾಲನ್ನು ಹೊಂದಿದೆ. ತನ್ನ ವಾಯುಯಾನ ವ್ಯವಹಾರಗಳನ್ನು ಒಂದೇ ಛತ್ರಿಯಡಿಯಲ್ಲಿ ಕ್ರೋಢೀಕರಿಸುವ ಟಾಟಾ ಸಮೂಹದ ಕಾರ್ಯತಂತ್ರದ ಭಾಗವಾಗಿ ಈ ಕ್ರಮ ಕೈಗೊಂಡಿದೆ.
ಏರ್‌ ಏಷಿಯಾ ಏವಿಯೇಷನ್ ​​ಏರ್‌ ಏಷ್ಯಾ ಇಂಡಿಯಾದಲ್ಲಿನ 16.33% ಪಾಲನ್ನು ಏರ್ ಇಂಡಿಯಾಗೆ ವಿಲೇವಾರಿ ಮಾಡಿದೆ. ಆದರೂ ಕಂಪನಿಗಳು ಷೇರು ಮಾರಾಟದ ನಿಖರವಾದ ಮೊತ್ತವನ್ನು ಬಹಿರಂಗಪಡಿಸಿಲ್ಲ. ಟಾಟಾದ ಏರ್ ಇಂಡಿಯಾ ಎಕ್ಸ್‌ ಪ್ರೆಸ್ ಮತ್ತು ಏರ್‌ ಏಷ್ಯಾ ಇಂಡಿಯಾ ಈಗ ಕಡಿಮೆ ವೆಚ್ಚದ ದೊಡ್ಡಮಟ್ಟದ ಏರ್‌ ಲೈನ್ ರೂಪಿಸುತ್ತವೆ, ಇದು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರ ಬಜೆಟ್ ಕ್ಯಾರಿಯರ್‌ ಗಳಿಗೆ ತೀವ್ರ ಸ್ಪರ್ಧೆ ಒಡ್ಡುತ್ತದೆ.
AirAsia 2014 ರಲ್ಲಿ ಟಾಟಾ ಜೊತೆ ಒಪ್ಪಂದ ಮಾಡಿಕೊಂಡು ಜಂಟಿ ಉದ್ಯಮ ರಚಿಸಿತು. ಟಾಟಾ ಸಮೂಹ 51% ಪಾಲನ್ನು ಹೊಂದಿತ್ತು. ಸುಮಾರು ಎರಡು ವರ್ಷಗಳ ಹಿಂದೆ, ಟಾಟಾ ಗ್ರೂಪ್ ಕಾನೂನು ಸಮಸ್ಯೆಗಳ ನಡುವೆ ಏರ್ ಏಷ್ಯಾ ಇಂಡಿಯಾದಲ್ಲಿ ಹೆಚ್ಚುವರಿ 32.67% ಪಾಲನ್ನು ಖರೀದಿಸಿ 83.67% ಕ್ಕೆ ಹೆಚ್ಚಿಸಿತು. ಈಗ ಸಂಪೂರ್ಣವಾಗಿ ಷೇರುಗಳನ್ನು ಖರೀದಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!