ಹೊಸದಿಗಂತ ಡಿಜಿಟಲ್ ಡೆಸ್ಕ್
ಅಡಿಲೇಡ್ ಓವಲ್‌ನಲ್ಲಿ ಸಾಗುತ್ತಿರುವ ನ್ಯೂಜಿಲೆಂಡ್ ಮತ್ತು ಐರ್ಲೆಂಡ್ ನಡುವೆ ನಡೆಯುತ್ತಿರುವ T20 ವಿಶ್ವಕಪ್ ಸೂಪರ್ 12 ಪಂದ್ಯದಲ್ಲಿ ಐರಿಷ್ ವೇಗಿ ಜೋಶುವಾ ಲಿಟಲ್ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಅವರು ಪಂದ್ಯಾವಳಿಯ ಎರಡನೇ ಹ್ಯಾಟ್ರಿಕ್ ಸಾಧಕನಾಗಿ ಮೂಡಿಬಂದಿದ್ದಾರೆ. ನ್ಯೂಜಿಲೆಂಡ್‌ನ ಇನ್ನಿಂಗ್ಸ್‌ನ 19 ನೇ ಓವರ್‌ನಲ್ಲಿ ಕೇನ್ ವಿಲಿಯಮ್ಸನ್, ಜಿಮ್ಮಿ ನೀಶಮ್ ಮತ್ತು ಮಿಚೆಲ್ ಸ್ಯಾಂಟ್ನರ್ ಅವರ ವಿಕಟೆ ಗಳನ್ನು ಕಬಳಿಸುವ ಮೂಲಕ ಐರಿಶ್ ವೇಗಿ ಈ ಸಾಧನೆ ಮಾಡಿದ್ದಾರೆ.
ಲಿಟಲ್ ಶಾರ್ಟ್ ಪಿಚ್ ಎಸೆತದಲ್ಲಿ ವಿಲಿಯಮ್ಸನ್ ಡೀಪ್‌ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಆ ಬಳಿಕ ಬಂದ ನೀಶಮ್ ಮತ್ತು ಸ್ಯಾಂಟ್ನರ್ ಇಬ್ಬರೂ ಎಲ್ ಬಿಗೆ ಬಲಿಯಾಗಿ ವಿಕೆಟ್ ಒಪ್ಪಿಸಿದರು.
ವಿಡಿಯೋ ನೋಡಿ.
ಸೆಮೀಸ್ ತಲುಪಲು ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕಿಳಿದಿರುವ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 185/6 ಕಲೆಹಾಕಿದೆ. ನಾಯಕ ಕೇನ್ ವಿಲಿಯಮ್ಸನ್ 61 ರನ್, ಫಿನ್ ಅಲೆನ್ ಮತ್ತು ಡೇರಿಲ್ ಮಿಚೆಲ್ ಕ್ರಮವಾಗಿ 32 ಮತ್ತು 31 ರನ್ ಗಳಿಸಿದರು. ಐರ್ಲೆಂಡ್ ಪರ ಲಿಟಲ್ ಮೂರು ವಿಕೆಟ್ ಕಬಳಿಸಿದರೆ, ಗರೆಥ್ ಡೆಲಾನಿ ಎರಡು ವಿಕೆಟ್ ಪಡೆದರು. ನ್ಯೂಜಿಲೆಂಡ್ ಪ್ರಸ್ತುತ ಗುಂಪು 1 ರಲ್ಲಿ 5 ಅಂಕಗಳನ್ನು ಹೊಂದಿದೆ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಷ್ಟೇ ಅಂಕಗಳನ್ನು ಹೊಂದಿದ್ದು ಈ ಪಂದ್ಯ ಗೆದ್ದರೆ ಸೆಮೀಸ್ ಪ್ರವೇಶಿಸಲಿದೆ. ಆದರೆ ಅವರ ನಿವ್ವಳ ರನ್-ರೇಟ್ ತುಂಬಾ ಉತ್ತಮವಾಗಿದೆ.
ಯುಎಇ ಸ್ಪಿನ್ನರ್ ಕಾರ್ತಿಕ್ ಮೇಯಪ್ಪನ್ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.