ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಷ್ಟ್ರ ರಾಜಧಾನಿಯ ವಾಯುಮಾಲಿನ್ಯ ಮತ್ತು ಹದಗೆಡುತ್ತಿರುವ ಗಾಳಿಯ ಗುಣಮಟ್ಟವು ಕೇವಲ ರಾಷ್ಟ್ರ ರಾಜಧಾನಿ ದೆಹಲಿಯ ಸಮಸ್ಯೆಯಲ್ಲ ಕೇಂದ್ರವು ಮಧ್ಯಪ್ರವೇಶಿಸಿ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗಿನ ಪತ್ರಿಕಾಗೋಷ್ಠಿಯಲ್ಲಿ ಕೇಜ್ರಿವಾಲ್ ಅವರು “ಕೇಂದ್ರವು ಕ್ರಮ ಕೈಗೊಳ್ಳಲು ಮುಂದಾಗಬೇಕು, ಇದು ಪಂಜಾಬ್ ಮತ್ತು ದೆಹಲಿಗೆ ಸೀಮಿತವಾದ ಸಮಸ್ಯೆಯಲ್ಲ ಈ ಸಮಸ್ಯೆ ಉತ್ತರ ಭಾರತದ ಸಮಸ್ಯೆ” ಎಂದು ಹೇಳಿದ್ದಾರೆ.
ದೆಹಲಿಯ ಗಾಳಿಯ ಗುಣಮಟ್ಟಕ್ಕೆ ಸಂಬಂಧಿಸಿದಂತೆ ದೂರುವ ಆಟದಿಂದ ದೂರವಿರಬೇಕು ಎಂದು ಅವರು ಕೇಂದ್ರವನ್ನು ಒತ್ತಾಯಿಸಿ “ಇದು ಆರೋಪ ಮತ್ತು ರಾಜಕೀಯದ ಸಮಯವಲ್ಲ” ಎಂದಿದ್ದಾರೆ.
“ಇದಕ್ಕೆ (ದೆಹಲಿ ಗಾಳಿಯ ಗುಣಮಟ್ಟ) ಎಎಪಿ ಮತ್ತು ಕೇಜ್ರಿವಾಲ್ ಮಾತ್ರ ಜವಾಬ್ದಾರರಲ್ಲ. ಕೇಂದ್ರ ಸರ್ಕಾರವು ಮುಂದೆ ಬಂದು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದ್ದಾರೆ.