ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಹಾರ ಸೇವಿಸುವಾಗ ಬಹಳ ಎಚ್ಚರದಿಂದ ಸೇವಿಸಬೇಕು. ಬೇಗ ಬೇಗ ತಿನ್ನುವುದು, ಒಂದೇ ಸಲ ಹೆಚ್ಚಿನ ಆಹಾರ ತೆಗೆದುಕೊಳ್ಳುವುದು ಇದೆಲ್ಲವೂ ಒಮ್ಮೆಮ್ಮೊ ನಮ್ಮ ಪ್ರಾಣಕ್ಕೆ ಕುತ್ತು ತರಬಹುದು. ಅಂತಯೇ ಇಲ್ಲೊಬ್ಬ ವ್ಯಕ್ತಿ ಆಮ್ಲೆಟ್ ತಿನ್ನುತ್ತಲೇ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ತೆಲಂಗಾಣದ ಜನಗಾಮ ಜಿಲ್ಲೆಯಲ್ಲಿ ನಡೆದಿದೆ. ಜನಗಾಮ ಜಿಲ್ಲೆಯ ಬಚನ್ನಪೇಟೆಯ ಭೂಪಾಲ್ ರೆಡ್ಡಿ ಎಂಬುವವರು ಸ್ಥಳೀಯ ಮದ್ಯದಂಗಡಿಗೆ ಹೋಗಿ ತಾನು ಸೇವಿಸುವ ಬ್ರಾಂಡ್ ತೆಗೆದುಕೊಂಡು ಪಕ್ಕದ ಪರ್ಮಿಟ್ ರೂಮಿಗೆ ಹೋದ. ಮದ್ಯಪಾನ ಮಾಡುವಾಗ ರುಚಿಗಾಗಿ ಆಮ್ಲೆಟ್ ಆರ್ಡರ್ ಮಾಡಿದ್ದಾನೆ ಆ ಆಮ್ಲೆಟ್ ಅವನ ಪ್ರಾಣವನ್ನೇ ತೆಗೆದುಕೊಂಡಿತು.
ಮದ್ಯ ಸೇವಿಸುತ್ತಿದ್ದ ಭೂಪಾಲ್ ಆಮ್ಲೆಟ್ ತಿಂದಿದ್ದು, ಆ ಆಮ್ಲೆಟ್ ಇದ್ದಕ್ಕಿದ್ದಂತೆ ಗಂಟಲಲ್ಲಿ ಸಿಲುಕಿಕೊಂಡಿದೆ. ಇದರಿಂದ ಭೂಪಾಲ್ ರೆಡ್ಡಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಾರ್ ಮಾಲೀಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆಮ್ಲೆಟ್ ಗಂಟಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆಯೇ? ಅಥವಾ ಬೇರೇನಾದರೂ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.