ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಂಗ್‌ಕಾಂಗ್‌ನ ತೈಪೊ ಜಿಲ್ಲೆಯ ವಾಂಗ್ ಫುಕ್ ಕೋರ್ಟ್ ಎಂಬ 8 ಬಹುಮಹಡಿ ಕಟ್ಟಡಗಳ ಸಂಕೀರ್ಣದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ. 2ನೇ ದಿನವಾದ ಗುರುವಾರವೂ ಬೆಂಕಿ ವ್ಯಾಪಿಸಿದ್ದರಿಂದ ಅಪಾರ ಪ್ರಮಾಣದ ಸಾವು ನೋವಾಯಿತು.
ಸದ್ಯ ಬೆಂಕಿಯನ್ನ ನಿಯಂತ್ರಣಕ್ಕೆ ತರಲಾಗಿದ್ದು, ಅಗ್ನಿಶಾಮಕ ಕಾರ್ಯಾಚರಣೆ ಬಹುತೇಕ ಪೂರ್ಣಗೊಂಡಿದೆ ಎಂದು ಅಗ್ನಿಶಾಮಕ ಸೇವೆಗಳ ಕಾರ್ಯಾಚರಣೆಗಳ ಉಪ ನಿರ್ದೇಶಕ ಡೆರೆಕ್ ಆರ್ಮ್‌ಸ್ಟ್ರಾಂಗ್ ಚಾನ್ ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ ಹೊತ್ತಿಗೆ 279 ಜನರೊಂದಿಗೆ ಸಂಪರ್ಕ ಕಡಿತಗೊಂಡಿದೆ. ಮತ್ತೊಂದು ಕಡೆ 44 ಇದ್ದ ಸಾವಿನ ಸಂಖ್ಯೆ 94ಕ್ಕೆ ಏರಿಕೆಯಾಗಿದೆ. ಅನೇಕರು ನಾಪತ್ತೆಯಾಗಿದ್ದು, ಸಾವುನೋವು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹಾಂಗ್ ಕಾಂಗ್‌ನ ಹಿರಿಯ ನಾಯಕ ಜಾನ್ ಲೀ ಹೇಳಿದ್ದಾರೆ ಎಂದು ವರದಿಯಾಗಿದೆ.
ಹಾಂಕಾಂಗ್‌ನಲ್ಲಿ ಅಗ್ನಿ ಅವಘಡ: ಮೃತರ ಸಂಖ್ಯೆ 94ಕ್ಕೆ ಏರಿಕೆ,200 ಮಂದಿ ಮಿಸ್ಸಿಂಗ್

