ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ವೈಟ್ ಹೌಸ್ ಸಮೀಪ ನಡೆದ ಗುಂಡಿನ ದಾಳಿ ಬಳಿಕ ಅಮೆರಿಕ ವಲಸೆ ನೀತಿಯಲ್ಲಿ ಮಹತ್ವದ ಬದಲಾವಣೆಯೊಂದು ಘೋಷಣೆಯಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ತೃತೀಯ ಜಗತ್ತಿನ’ ದೇಶಗಳಿಂದ ಅಮೆರಿಕಕ್ಕೆ ನಡೆಯುತ್ತಿದ್ದ ವಲಸೆ ಪ್ರವೇಶವನ್ನು ಶಾಶ್ವತವಾಗಿ ಸ್ಥಗಿತಗೊಳಿಸುವ ನಿರ್ಧಾರ ಪ್ರಕಟಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಹೊರಡಿಸಿರುವ ಅವರು, ಹಿಂದಿನ ಆಡಳಿತದ ಸಡಿಲ ನೀತಿಗಳೇ ದೇಶದ ಭದ್ರತೆಗೆ ಧಕ್ಕೆ ತಂದಿವೆ ಎಂದು ಕಿಡಿಕಾರಿದ್ದಾರೆ. ಅಕ್ರಮ ಪ್ರವೇಶ ಹಾಗೂ ಭದ್ರತಾ ಅಪಾಯವಾಗುವ ಎಲ್ಲ ಅಂಶಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ.
ಈ ನಿರ್ಧಾರದ ಜೊತೆಗೆ, ಆತಂಕಕಾರಿ ದೇಶಗಳಿಂದ ಬಂದ ಎಲ್ಲಾ ವಲಸಿಗರ ಗ್ರೀನ್ ಕಾರ್ಡ್‌ಗಳಿಗೂ ಕಠಿಣ ಮರುಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ. ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳು ಕೂಡ ತಕ್ಷಣದಿಂದಲೇ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.

