October 19, 2026
Monday, October 19, 2026
spot_img

ಸರ್, ಫಾಸ್ಟ್ಯಾಗ್ ನಿಂದ ಹಣ ಕಟ್ ಮಾಡಬೇಡಿ, ಹೆಂಡ್ತಿಗೆ ಮೆಸೇಜ್ ಹೋಗುತ್ತೆ: ವ್ಯಕ್ತಿಯ ಮನವಿ ಕೇಳಿ ಟೋಲ್ ಸಿಬ್ಬಂದಿ ಏನು ಮಾಡಿದ್ರು ನೋಡಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟೋಲ್ ಪ್ಲಾಜಾಗಳಲ್ಲಿ ಸಾಮಾನ್ಯವಾಗಿ ಹಣ ಪಾವತಿಸುವ ವಿಚಾರಕ್ಕೆ ಸಿಬ್ಬಂದಿ ಮತ್ತು ಸಾರ್ವಜನಿಕರ ನಡುವೆ ಜಗಳ, ವಾಗ್ವಾದಗಳು ನಡೆಯುತ್ತಿರುತ್ತದೆ. ಆದರೆ ಇಲ್ಲಿ ವ್ಯಕ್ತಿಯೊಬ್ಬರು ಟೋಲ್ ಸಿಬ್ಬಂದಿ ಬಳಿ ಹಣ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕಾರೊಂದರಲ್ಲಿ ಬಂದ ವ್ಯಕ್ತಿ ಟೋಲ್ ಗೇಟ್ ತಲುಪಿದಾಗ, ಅಲ್ಲಿನ ಸಿಬ್ಬಂದಿಗೆ ಶುಲ್ಕವನ್ನು ಕಾರ್ಡ್‌ನಿಂದ ಕಟ್ ಮಾಡದಂತೆ ವಿನಂತಿಸಿಕೊಂಡಿದ್ದಾರೆ.

https://www.instagram.com/reel/DVqJrsNEsdf/?utm_source=ig_embed&ig_rid=4fcdd9b9-d820-4f68-aca9-e86cdf401470

‘ನನ್ನ ಕಾರಿನ ಮೇಲೆ ಅಂಟಿಸಿರುವ ಫಾಸ್ಟ್‌ಟ್ಯಾಗ್ ಕಾರ್ಡ್‌ನಲ್ಲಿ ಹಣ ಇದೆ , ಆದರೆ ನಾನು ಕಾರ್ಡ್‌ನಿಂದ ಟೋಲ್ ಪಾವತಿಸಿದರೆ ಆ ಮೆಸೇಜ್ (SMS) ಕೂಡಲೇ ನನ್ನ ಹೆಂಡತಿಯ ಫೋನ್‌ಗೆ ಹೋಗುತ್ತದೆ. ನಾನು ಮನೆಯಿಂದ ಯಾರಿಗೂ ಹೇಳದೆ ಗುಟ್ಟಾಗಿ ಹೊರಬಂದಿದ್ದೇನೆ. ಒಂದು ವೇಳೆ ಮೆಸೇಜ್ ಹೋದರೆ ನಾನು ಸಿಕ್ಕಿಬೀಳುತ್ತೇನೆ. ಹೀಗಾಗಿ, ಕ್ಯಾಶ್ ರೂಪದಲ್ಲಿ ಹಣ ಪಡೆದು ನನ್ನನ್ನು ಬಿಡುವಂತೆ ಕೇಳಿಕೊಂಡಿದ್ದಾನೆ.

ಇತ್ತ ವ್ಯಕ್ತಿಯ ಮಾತನ್ನು ಕೇಳಿ ಟೋಲ್ ಸಿಬ್ಬಂದಿ ಪರಿಸ್ಥಿತಿಯ ಗಂಭೀರತೆ ಮತ್ತು ಅದರಲ್ಲಿನ ಹಾಸ್ಯವನ್ನು ಅರ್ಥಮಾಡಿಕೊಂಡ ನಗುನಗುತ್ತಲೇ ಆತನಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಆತನ ವಾಹನವನ್ನು ‘ಲೋಕಲ್ ಪಾಸ್’ (ಸ್ಥಳೀಯ ವಾಹನ) ಎಂದು ಮಾರ್ಕ್ ಮಾಡಿ, ಯಾವುದೇ ಶುಲ್ಕ ವಿಧಿಸದೆ ಉಚಿತವಾಗಿ ಹೋಗಲು ಅನುವು ಮಾಡಿಕೊಟ್ಟಿದ್ದಾರೆ.

ಈ ಘಟನೆಯು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ.

Must Read