Friday, November 28, 2025

Parenting Tips | ನಿಮ್ಮ ಮಕ್ಕಳಿಗೆ ನೀವು ಕುಡಿಸೋ ನೀರು ಸಾಕಾಗ್ತಿದ್ಯಾ? ಕಂಡುಹಿಡಿಯೋದು ಹೇಗೆ?

ಮಕ್ಕಳು ದಿನವಿಡೀ ಓಟ, ಆಟ, ಓದು ಅಂತಾ ಚುರುಕಾಗಿ ಇರುತ್ತಾರೆ. ಇಂತಹ ಚಟುವಟಿಕೆಗಳಲ್ಲಿ ಅವರ ದೇಹದಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಹೊರ ಹೋಗುತ್ತದೆ. ಆದರೆ ಹೆಚ್ಚಿನ ಪೋಷಕರು “ಮಗು ಸ್ವಲ್ಪ ನೀರು ಕುಡಿದ್ರೆ ಸಾಕು” ಎಂದು ಅಲಕ್ಷ್ಯ ಮಾಡುತ್ತಾರೆ. ದೇಹಕ್ಕೆ ಬೇಕಾದಷ್ಟು ನೀರು ಸಿಗದಿದ್ದರೆ ಅದು ನಿಧಾನವಾಗಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾದ್ರೆ ನಿಮ್ಮ ಮಗು ನಿಜಕ್ಕೂ ಸಾಕಷ್ಟು ನೀರು ಕುಡಿಯುತ್ತಿದೆಯೇ ಇಲ್ಲವೇ ಎಂಬುದನ್ನು ಹೇಗೆ ಗುರುತಿಸಬಹುದು?

ಮಕ್ಕಳಿಗೆ ನೀರು ಕಡಿಮೆಯಾಗಿದೆಯೇ ಎಂದು ತಿಳಿಯುವ ಸೂಚನೆಗಳು ಇಲ್ಲಿವೆ

  • ಮಗು ಪದೇಪದೇ ಆಯಾಸಗೊಂಡರೆ
  • ಬಾಯಿ ಒಣಗಿರುವುದು, ತುಟಿಗಳು ಬಿರುಕಾಗಿರುವುದು
  • ಮೂತ್ರದ ಬಣ್ಣ ಗಾಢವಾಗಿರುವುದು
  • ತಲೆನೋವು, ತಲೆತಿರುಗು, ಗಮನ ಕಡಿಮೆಯಾಗುವುದು
  • ಮಲಬದ್ಧತೆ ಸಮಸ್ಯೆ ಹೆಚ್ಚಾಗುವುದು

ಮಕ್ಕಳಿಗೆ ಎಷ್ಟು ನೀರು ಅಗತ್ಯ?
ವಯಸ್ಸು, ಹವಾಮಾನ ಮತ್ತು ಚಟುವಟಿಕೆಗೆ ಅನುಗುಣವಾಗಿ ನೀರಿನ ಅವಶ್ಯಕತೆ ಬದಲಾಗುತ್ತದೆ. ಸಾಮಾನ್ಯವಾಗಿ ಶಾಲಾ ಮಕ್ಕಳಿಗೆ ದಿನಕ್ಕೆ ಕನಿಷ್ಠ 1.5 ರಿಂದ 2.5 ಲೀಟರ್ ನೀರು ಅಗತ್ಯವಿರುತ್ತದೆ.

ನೀರನ್ನು ಕುಡಿಯಲು ಮಕ್ಕಳನ್ನು ಹೇಗೆ ಉತ್ತೇಜಿಸಬೇಕು?
ನೀರನ್ನು ಚಿಕ್ಕ ಚಮಚಗಳಲ್ಲಿ, ಪದೇಪದೇ ನೀಡುವುದು, ಶಾಲೆಗೆ ಹೋಗುವಾಗ ನೀರಿನ ಬಾಟಲ್ ಕಡ್ಡಾಯವಾಗಿ ನೀಡುವುದು, ಹಣ್ಣು–ತರಕಾರಿಗಳ ಮೂಲಕವೂ ನೀರಿನ ಅಂಶ ಹೆಚ್ಚಿಸುವುದು ಉತ್ತಮ.

ಮಕ್ಕಳ ದೇಹದಲ್ಲಿ ನೀರಿನ ಸಮತೋಲನ ಸರಿಯಾಗಿದ್ರೆ ಅವರ ಜೀರ್ಣಕ್ರಿಯೆ, ಚಟುವಟಿಕೆ, ಗಮನಶಕ್ತಿ ಮತ್ತು ಒಟ್ಟು ಆರೋಗ್ಯ ಎಲ್ಲವೂ ಉತ್ತಮವಾಗಿರುತ್ತದೆ. ಆದ್ದರಿಂದ “ಮಗುವಿಗೆ ನೀರು ಸಾಕು” ಎಂದು ನಿರ್ಲಕ್ಷ್ಯ ಮಾಡದೆ, ಪ್ರತಿದಿನವೂ ಗಮನಹರಿಸುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯ.

error: Content is protected !!