ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಸೈಕ್ಲಿಂಗ್ ಫೆಡರೇಶನ್ (CFI) ಪುರುಷರ ಎಲೈಟ್ ರೈಡರ್‌ಗಳಿಗಾಗಿ ಆಯ್ಕೆ ಟ್ರಯಲ್ಸ್ ಅನ್ನು ಘೋಷಿಸಿದೆ.
2026ರ ಜನವರಿ 19ರಿಂದ 23ರವರೆಗೆ ನಡೆಯಲಿರುವ ದೇಶದ ಮೊದಲ UCI 2.2 ವರ್ಗದ ರಸ್ತೆ ರೇಸ್ ‘ಬಜಾಜ್ ಪುಣೆ ಗ್ರ್ಯಾಂಡ್ ಟೂರ್’ ಗಾಗಿ ‘ಇಂಡಿಯಾ A’ ಮತ್ತು ‘ಇಂಡಿಯಾ B’ ಎಂಬ ಎರಡು ತಂಡಗಳನ್ನು ಕಣಕ್ಕಿಳಿಸುವ ಗುರಿ ಹೊಂದಿದೆ.
ರಾಷ್ಟ್ರೀಯ ರಸ್ತೆ ಸೈಕ್ಲಿಂಗ್ ಚಾಂಪಿಯನ್‌ಶಿಪ್-ಕಮ್-ಸೆಲೆಕ್ಷನ್ ಟ್ರಯಲ್ಸ್‌ಗಳು 2025ರ ಡಿಸೆಂಬರ್ 2ರಿಂದ 6ರವರೆಗೆ ಒಡಿಶಾದ ಸಂಬಲ್‌ಪುರದಲ್ಲಿ ನಡೆಯಲಿವೆ. ಶಾರ್ಟ್‌ಲಿಸ್ಟ್ ಮಾಡಿದ ಕ್ರೀಡಾಪಟುಗಳನ್ನು 2025ರ ಡಿಸೆಂಬರ್ 28ರಂದು ಪುಣೆಯಲ್ಲಿ ನಡೆಯುವ ರಾಷ್ಟ್ರೀಯ ರಸ್ತೆ ಓಟದ ಮೂಲಕ ಅಂತಿಮವಾಗಿ ಮೌಲ್ಯಮಾಪನ ಮಾಡಲಾಗುತ್ತದೆ.
‘ಇಂಡಿಯಾ A’ ಮತ್ತು ‘ಇಂಡಿಯಾ B’ ತಂಡಗಳ ಉಪಸ್ಥಿತಿಯು ಉದಯೋನ್ಮುಖ ಮತ್ತು ಅನುಭವಿ ಸೈಕ್ಲಿಸ್ಟ್‌ಗಳಿಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ವಿಶಾಲ ಅವಕಾಶ ನೀಡಲಿದೆ.
ಬಜಾಜ್ ಪುಣೆ ಗ್ರ್ಯಾಂಡ್ ಟೂರ್ 2026 ಪುಣೆ ಮತ್ತು ಭಾರತದ ಹೆಸರನ್ನು ಯೂನಿಯನ್ ಸೈಕ್ಲಿಸ್ಟ್ ಇಂಟರ್‌ನ್ಯಾಷನಲ್ (UCI) ಜಾಗತಿಕ ಕ್ಯಾಲೆಂಡರ್‌ನಲ್ಲಿ ಶಾಶ್ವತವಾಗಿ ಸ್ಥಾನಗೊಳ್ಳುವಂತೆ ಮಾಡುವ ಉದ್ದೇಶ ಹೊಂದಿರುವ ದೇಶದ ಫ್ಲಾಗ್‌ಶಿಪ್ ಈವೆಂಟ್. ಉದ್ಘಾಟನಾ ಆವೃತ್ತಿಯು ಗಣ್ಯ ಅಂತರರಾಷ್ಟ್ರೀಯ ಸೈಕ್ಲಿಸ್ಟ್‌ಗಳನ್ನು ಆಕರ್ಷಿಸಲಿದೆ. ನಾಲ್ಕು ಹಂತಗಳ ಮೂಲಕ ಒಟ್ಟು 437 ಕಿಮೀ ಮಾರ್ಗವನ್ನು ಒಳಗೊಂಡಿರುವ ಈ ಟೂರ್ ಪುಣೆ ಜಿಲ್ಲೆಯ ಸೊಬಗು ತುಂಬಿದ ಪ್ರದೇಶಗಳನ್ನು ಹಾದುಹೋಗಲಿದೆ.
ಮುಂಬರುವ ಆಯ್ಕೆ ಟ್ರಯಲ್ಸ್ ಕುರಿತು ಮಾತನಾಡಿದ ಭಾರತೀಯ ಸೈಕ್ಲಿಂಗ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಶ್ರೀ ಮಣೀಂದರ್ ಪಾಲ್ ಸಿಂಗ್ ಹೇಳಿದರು:
“ಬಜಾಜ್ ಪುಣೆ ಗ್ರ್ಯಾಂಡ್ ಟೂರ್ 2026ಗಾಗಿ ಬಲಿಷ್ಠ ತಂಡಗಳನ್ನು ರಚಿಸುವತ್ತ ರಾಷ್ಟ್ರೀಯ ಚಾಂಪಿಯನ್‌ಶಿಪ್-ಕಮ್-ಸೆಲೆಕ್ಷನ್ ಟ್ರಯಲ್ಸ್ ಒಂದು ಪ್ರಮುಖ ಹಂತ. ಇಂಡಿಯಾ A ಮತ್ತು ಇಂಡಿಯಾ B ತಂಡಗಳ ಪರಿಚಯವು ಹೆಚ್ಚಿನ ಪ್ರತಿಭೆಯನ್ನು ಬೆಳೆಸುವುದರೊಂದಿಗೆ ಭಾರತೀಯ ಸೈಕ್ಲಿಂಗ್‌ನ ಗುಣಮಟ್ಟವನ್ನು ಹೆಚ್ಚಿಸಲಿದೆ ಎಂದರು.

