ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಸರ್ಕಾರದ ಆದೇಶದ ನಂತರ ನವೆಂಬರ್ 5 ರಿಂದ ಮುಚ್ಚಲಾಗಿದ್ದ ರಾಷ್ಟ್ರ ರಾಜಧಾನಿಯ ಪ್ರಾಥಮಿಕ ಶಾಲೆಗಳು ಬುಧವಾರ ಮತ್ತೆ ತೆರೆದಿವೆ. ಪ್ರಾಥಮಿಕ ಶಾಲೆಗಳು ಇಂದಿನಿಂದ (ನವೆಂಬರ್ 9) ಪುನರಾರಂಭಗೊಂಡಿದ್ದು, ಹೊರಾಂಗಣ ಚಟುವಟಿಕೆಗಳ ಮೇಲಿನ ನಿಷೇಧವನ್ನು ಸಹ ತೆಗೆದುಹಾಕಲಾಗಿದೆ.
ಹೆಚ್ಚುತ್ತಿರುವ ಮಾಲಿನ್ಯ ಮತ್ತು ರಾಷ್ಟ್ರ ರಾಜಧಾನಿಯ ಗಾಳಿಯ ಗುಣಮಟ್ಟ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿಷೇಧವನ್ನು ವಿಧಿಸಲಾಗಿತ್ತು. ಕಳೆದ ವಾರ ರಾಷ್ಟ್ರ ರಾಜಧಾನಿಯ ಗಾಳಿಯ ಗುಣಮಟ್ಟ ಅತ್ಯಂತ ಕಳಪೆಯಾಗಿದ್ದರಿಂದ ಅದನ್ನು ಗಮನದಲ್ಲಿಟ್ಟುಕೊಂಡು ಈ ನಿರ್ದೇಶನಗಳನ್ನು ನೀಡಲಾಗಿತ್ತು. ಇದೀಗ ಇಂದಿನಿಂದ ಶಾಲೆಗಳು ಪುನಃ ಆರಂಭವಾಗಿದ್ದು ಅನೇಕ ಪೋಷಕರು ಅತೃಪ್ತರಾಗಿದ್ದಾರೆ.
ಇಂತಹ ಕಲುಷಿತ ಗಾಳಿಯಲ್ಲಿ ಈ ಅಪ್ರಾಪ್ತರು ಶಾಲೆಗೆ ತೆರಳುವುದು ಕಷ್ಟ ಎಂದು ಅಭಿಪ್ರಾಯಪಟ್ಟರು. ಹೆಚ್ಚು ಹಸಿರು ಜೊತೆಗೆ ದೆಹಲಿಯ ಶಾಲೆಗಳು ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಒದಗಿಸುವಷ್ಟು ಸಾಮರ್ಥ್ಯವನ್ನು ಹೊಂದಿಲ್ಲದ ಕಾರಣ ಮಕ್ಕಳನ್ನು ನಿರ್ವಹಿಸುವುದು ಕಷ್ಟ. ಹಾಗಾಗಿ ಇನ್ನೂ ಸ್ವಲ್ಪದಿನ ಶಾಲೆ ಮುಚ್ಚಿದ್ದರೆ ಉತ್ತಮವಾಗಿತ್ತು. ಮಕ್ಕಳಲ್ಲಿ ಗಂಟಲು ನೋವು ಹಾಗೆ ಇದೆ. ಈ ಮಾಲಿನ್ಯದ ಮಧ್ಯೆ ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳಿಸುವುದು ಅವರಿಗೆ ಮತ್ತೊಂದು ಸವಾಲು ಎಂದು ಪೋಷಕರು ಅಭಿಪ್ರಾಯಪಟ್ಟರು.