Friday, November 28, 2025

‘ಕುರ್ಚಿ’ ಜಗಳದಲ್ಲಿ ಕುಂಠಿತವಾಯ್ತು ಕರ್ನಾಟಕದ ಪ್ರಗತಿ: ಸಂಸದ ಯದುವೀರ್‌ ಬೇಸರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವೆ ಸಿಎಂ ಸ್ಥಾನಕ್ಕಾಗಿ ನಡೆಯುತ್ತಿರುವ ಆಂತರಿಕ ಪೈಪೋಟಿಯು ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಭಾರಿ ಹಿನ್ನಡೆ ಉಂಟುಮಾಡಿದೆ ಎಂದು ಸಂಸದ ಯದುವೀರ್ ಒಡೆಯರ್ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಮಡಿಕೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯದುವೀರ್, ಕಾಂಗ್ರೆಸ್ ನಾಯಕರ ಹೆಸರನ್ನು ಉಲ್ಲೇಖಿಸದೆ, “ಅವರ ಇಬ್ಬರು ನಾಯಕರ ನಡುವಿನ ಕುರ್ಚಿ ಕಿತ್ತಾಟದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿವೆ. ಇದು ಅವರ ಪಕ್ಷದ ಆಂತರಿಕ ವಿಚಾರ. ಇದರ ಬಗ್ಗೆ ನಮಗೆ ಯಾವುದೇ ಕಾಳಜಿ ಇಲ್ಲ ಎಂದು ಕಾಂಗ್ರೆಸ್‌ ನಾಯಕರೇ ಹೇಳುತ್ತಿರುವುದು ವಿಷಾದನೀಯ” ಎಂದರು.

ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಆಡಳಿತ ನಡೆಸಲು ಅಧಿಕಾರ ನೀಡಿದ್ದಾರೆ. ಹೀಗಾಗಿ, ಜನರ ಹಿತವನ್ನು ಕಾಪಾಡುವುದು ಮತ್ತು ಆಡಳಿತ ನಡೆಸುವುದು ಅವರ ಪ್ರಥಮ ಕರ್ತವ್ಯವಾಗಿದೆ. “ಅವರ ಪಕ್ಷದೊಳಗೆ ಏನು ನಡೆಯಬೇಕೋ ಅದು ನಡೆಯಲಿ, ಆದರೆ ರಾಜ್ಯದ ಆಡಳಿತವು ಜನರಿಗಾಗಿ ಕೆಲಸ ಮಾಡಬೇಕು. ಆಡಳಿತದ ಕಡೆಗೆ ಗಮನ ಹರಿಸುವುದು ಅವರ ಮೊದಲ ಆದ್ಯತೆಯಾಗಿರಬೇಕು” ಎಂದು ಸಂಸದರು ಸ್ಪಷ್ಟವಾಗಿ ತಿಳಿಸಿದರು.

error: Content is protected !!