ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿ ಮನೆ ಎಂಬಲ್ಲಿಯ ಕೊಂಕಣ ರೈಲ್ವೇ ಟ್ರಾಕ್‌ನಲ್ಲಿ ಬುಧವಾರ ಬೆಳಗ್ಗೆ ಛಿದ್ರವಾದ ಮೃತದೇಹ ಪತ್ತೆಯಾಗಿದೆ.
ಮೃತದೇಹವನ್ನು ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಕಾಣೆಯಾಗಿದ್ದ ವೈದ್ಯರಾದ ಡಾ. ಕೃಷ್ಣಮೂರ್ತಿ ಎಸ್. ಬದಿಯಡ್ಕ (57) ಅವರದ್ದು ಎಂದು ಕುಟುಂಬಸ್ಥರು ಗುರುತಿಸಿದ್ದಾರೆ.
ಕೃಷ್ಣಮೂರ್ತಿ ಅವರ ಪುತ್ರಿ ಹಾಗೂ ಸಂಬಂಧಿಕರು ಮೃತದೇಹದ ಗುರುತು ಪತ್ತೆ ಹಚ್ಚಿದ್ದಾರೆ. . ಮೃತದೇಹದ ಪೋಸ್ಟ್ ಮಾರ್ಟಂ ನಡೆದ ನಂತರ ಊರಿಗೆ ತರಲಾಗುವುದು.
ನ.08 ರಂದು ಮಧ್ಯಾಹ್ನ 2 ಗಂಟೆಯಿಂದ ನ.09 ರ ಬೆಳಿಗ್ಗೆ 08 ಗಂಟೆಯ ನಡುವಿನ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಯು.ಡಿ.ಆರ್ ದಾಖಲಾಗಿದೆ.
ಮಂಗಳವಾರ ತಂಡವೊಂದರ ಕೊಲೆ ಬೆದರಿಕೆಯ ನಂತರ ಡಾ.ಕೃಷ್ಣಮೂರ್ತಿ ಅವರು ಬದಿಯಡ್ಕದ ಕ್ಲಿನಿಕ್ ನಿಂದ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದರು. ಅವರ ಬೈಕ್ ಕುಂಬಳೆಯಲ್ಲಿ ಕಂಡು ಬಂದಿತ್ತು. ಮೊಬೈಲ್ ಫೋನ್ ಕ್ಲಿನಿಕ್ ನಲ್ಲಿ ಪತ್ತೆಯಾಗಿತ್ತು.