January15, 2026
Thursday, January 15, 2026
spot_img

Perfume | ಪರ್ಫ್ಯೂಮ್ ಹಾಕೋದು ನಿಮಗೆ ಇಷ್ಟಾನಾ? ಹಾಗಿದ್ರೆ ಈ ತಪ್ಪು ಮಾಡ್ಲೇಬೇಡಿ!

ಒಂದು ಪರ್ಫ್ಯೂಮ್ ನಿಮ್ಮ ಹಾಜರಾತಿಯನ್ನೇ ಮೌನವಾಗಿ ಘೋಷಿಸುವ ಶಕ್ತಿ ಹೊಂದಿದೆ. ನೀವು ಮಾತಾಡುವ ಮೊದಲುನೇ ನಿಮ್ಮ ಬಗ್ಗೆ ಒಂದು ಭಾವನೆ ಮೂಡುವಂತೆ ಮಾಡುವುದೇ ಪರ್ಫ್ಯೂಮ್ ನ ವಿಶೇಷತೆ. ಆದರೆ ಸರಿಯಾದ ರೀತಿಯಲ್ಲಿ ಬಳಸದೇ ಹೋದರೆ, ಅದೇ ಸುಗಂಧ ಆಕರ್ಷಣೆಯ ಬದಲು ಮುಜುಗರ ಉಂಟುಮಾಡಬಹುದು. ಅನೇಕರು ದಿನನಿತ್ಯ ಪರಫ್ಯೂಮ್ ಬಳಸುತ್ತಿದ್ದರೂ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡುತ್ತಿರುತ್ತಾರೆ. ಅವುಗಳನ್ನು ತಪ್ಪಿಸಿಕೊಂಡರೆ ನಿಮ್ಮ ಸುಗಂಧವೂ ಹೆಚ್ಚು ಕಾಲ ಉಳಿಯುತ್ತದೆ, ಜೊತೆಗೆ ನಿಮ್ಮ ವ್ಯಕ್ತಿತ್ವಕ್ಕೂ ಇನ್ನಷ್ಟು ಮೆರುಗು ಸಿಗುತ್ತದೆ.

  • ಅತಿಯಾಗಿ ಹಚ್ಚುವುದು: ಹೆಚ್ಚು ಹಚ್ಚಿದರೆ ಹೆಚ್ಚು ಚೆನ್ನಾಗಿರುತ್ತದೆ ಎಂಬ ಭ್ರಮೆ ತಪ್ಪು. ಅತಿಯಾದ ವಾಸನೆ ನಿಮ್ಮ ಮುಂದಿನವರಿಗೆ ತಲೆನೋವು ತರಬಹುದು.
  • ಒಣ ಚರ್ಮದ ಮೇಲೆ ಮಾತ್ರ ಹಚ್ಚುವುದು: ಚರ್ಮ ಒಣಗಿದ್ದರೆ ಪರಫ್ಯೂಮ್ ಬೇಗ ಗಾಳಿಗೆ ಆವಿಯಾಗುತ್ತದೆ. ಸ್ವಲ್ಪ ಮಾಯಿಶ್ಚರೈಸರ್ ಹಚ್ಚಿದ ಬಳಿಕ ಬಳಸಿದರೆ ವಾಸನೆ ಹೆಚ್ಚು ಕಾಲ ಉಳಿಯುತ್ತದೆ.
  • ತಪ್ಪು ಸ್ಥಳದಲ್ಲಿ ಬಳಸುವುದು: ಕೈಮಣಿಕಟ್ಟು, ಕಿವಿಯ ಹಿಂದೆ, ಕಂಠ ಭಾಗ ಇವು ಸೂಕ್ತ ಸ್ಥಳಗಳು. ಬಟ್ಟೆ ಮೇಲೆ ನೇರವಾಗಿ ಹಚ್ಚುವುದು ತಪ್ಪು.
  • ಬೇರೆ ಬೇರೆ ಸುಗಂಧಗಳನ್ನು ಮಿಶ್ರಣ ಮಾಡುವುದು: ಹಲವಾರು ಪರ್ಫ್ಯೂಮ್ ಗಳನ್ನು ಒಟ್ಟಿಗೆ ಬಳಸದಿರಿ. ವಾಸನೆ ಗೊಂದಲವಾಗಿ ಬದಲಾಗುತ್ತದೆ.
  • ಬಿಸಿಲಿನಲ್ಲಿ ಸಂಗ್ರಹಿಸುವುದು: ಬಿಸಿ ಅಥವಾ ನೇರ ಸೂರ್ಯಪ್ರಕಾಶ ಬೀಳುವಲ್ಲಿ ಪರ್ಫ್ಯೂಮ್ ಇಡುವುದು ಗುಣಮಟ್ಟವನ್ನು ಹಾಳುಮಾಡುತ್ತದೆ. ತಂಪಾದ, ಕತ್ತಲೆಯ ಸ್ಥಳದಲ್ಲಿ ಇಡುವುದು ಉತ್ತಮ.
  • ಅವಧಿ ಮೀರಿದ ಪರಫ್ಯೂಮ್ ಬಳಸು: ಅವಧಿ ಮೀರಿದ ಪರಫ್ಯೂಮ್ ಚರ್ಮಕ್ಕೆ ಹಾನಿ ಮಾಡಬಹುದು ಹಾಗೂ ದುರ್ವಾಸನೆ ಕೊಡಬಹುದು.

Most Read

error: Content is protected !!