ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಸಲುವಾಗಿ ಇಂಡೋನೇಷ್ಯಾಕ್ಕೆ ಬಂದಿಳಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಎದುರಾಗಿತ್ತು. ಈ ವೇಳೆ ಅಲ್ಲಿನ ಅನಿವಾಸಿ ಭಾರತೀಯರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಗೌರವ ಸೂಚಿಸಿದರು. ವಿಮಾನ ಇಳಿಯುತ್ತಿದ್ದಂತೆ ಸಾಂಪ್ರದಾಯಿಕ ಹಾಗೂ ರಾಜತಾಂತ್ರಿಕ ಗೌರವವನ್ನು ನರೇಂದ್ರ ಮೋದಿ ಸ್ವೀಕರಿಸಿದರು. ಕೆಲ ಕ್ಷಣ ಅಲ್ಲಿನ ನೆರೆದಿದ್ದ ಭಾರತೀಯರೊಂದಿಗೆ ಮೋದಿ ಮಾತುಕತೆ ನಡೆಸಿದರು. ಮೋದಿ ನೋಡಲು ಜನಸಾಗರವೇ ಹರಿದು ಬಂದಿತ್ತು.