ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಕಡಮೆ ವಿರಾಮ ಘೋಷಿಸಲು ಸಲಹೆ ನೀಡುತ್ತಿದ್ದರೆ. ಇತ್ತ ಉಕ್ರೇನ್ ನ ಕೈವ್ ನಲ್ಲಿ ಎರಡು ಸ್ಫೋಟಗಳು ಸಂಭವಿಸಿವೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಬಾಲಿಯಲ್ಲಿ ಭೇಟಿಯಾಗುತ್ತಿರುವ 20 ರಾಷ್ಟ್ರಗಳ ನಾಯಕರಿಗೆ ವಿಡಿಯೋ ಭಾಷಣ ಮಾಡಿದ ಗಂಟೆಗಳ ನಂತರ ಉಕ್ರೇನ್ನಾದ್ಯಂತ ಸ್ಫೋಟಗಳು ಸಂಭವಿಸಿವೆ ಎಂದು ತಿಳಿದು ಬಂದಿದೆ.
ಜಿ20 ಶೃಂಗಸಭೆಯಲ್ಲಿ ಝೆಲೆನ್ಸ್ಕಿಅವರ ಭಾಷಣಕ್ಕೆ ಇತ್ತ ಹೊಸ ಕ್ಷಿಪಣಿ ದಾಳಿಯೊಂದಿಗೆ ರಷ್ಯಾ ಪ್ರತಿಕ್ರಿಯಿಸಿದೆ.