Wednesday, January 14, 2026
Wednesday, January 14, 2026
spot_img

ಕಥೆಯೊಂದ ಹೇಳುವೆ 4 | ಮಾಡಿದ್ದುಣ್ಣೋ ಮಹರಾಯ ಅನ್ನೋದು ಸತ್ಯ! ಒಳ್ಳೆ ವಿಷಯಕ್ಕೂ ಇದು ಅಪ್ಲೇ ಆಗತ್ತಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾಲೆಗೆ ಹೋಗೋ ಆ ಪುಟ್ಟ ಹುಡುಗನಿಗೆ ತನ್ನದೇ ಆದ ಸೈಕಲ್ ಇರಬೇಕು, ಅದರಲ್ಲೇ ಸ್ಕೂಲ್ ಗೆ ಹೋಗಬೇಕು ಅನ್ನೋ ಆಸೆ. ಆದರೆ ಅವನ ತಂದೆಯ ಬಳಿ ಅಷ್ಟು ಹಣವಿರಲಿಲ್ಲ. ಹಾಗಂತ ಯಾವತ್ತೂ ಅವನು ಬೇಜಾರ್ ಮಾಡಿಕೊಂಡಿರಲಿಲ್ಲ.

ಒಂದು ದಿನ ಅವನು ಶಾಲೆಗೆ ಹೋಗುವಾಗ ಮತ್ತೊಬ್ಬ ಹುಡುಗ ಸೈಕಲ್ ಮೇಲೆ ಹೋಗುತ್ತಿದ್ದ. ರಸ್ತೆಯ ಟರ್ನ್ ನಲ್ಲಿ ಸೈಕಲ್ ಬ್ಯಾಲೆನ್ಸ್ ತಪ್ಪಿ ಆ ಹುಡುಗ ಜಾರಿಬಿದ್ದು, ಗಾಯವಾಗುತ್ತೆ. ಇದನ್ನು ಕಂಡ ಪುಟ್ಟ ಹುಡುಗ ತಕ್ಷಣವೇ ಅವನ ಸಹಾಯಕ್ಕೆ ಧಾವಿಸುತ್ತಾನೆ. ಅವನನ್ನು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸುತ್ತಾನೆ. ನಂತರ ಆ ಹುಡುಗನನ್ನು ಮನೆಗೆ ಸೇರಿಸುತ್ತಾನೆ.

ಸೈಕಲ್ ನಿಂದ ಬಿದ್ದ ಹುಡುಗ ಶ್ರೀಮಂತ ಕುಟುಂಬದವನಾಗಿರುತ್ತಾನೆ. ಅವನು ಮನೆಗೆ ಬಂದು ಅಪ್ಪ ಅಮಾನ್ನ ಹತ್ತಿರ ನಡೆದ ವಿಷಯ ಎಲ್ಲಾ ಹೇಳ್ತಾನೆ. ಅವನ ತಂದೆತಾಯಿ ಆ ಪುಟ್ಟ ಹುಡುಗನ ಸಹಾಯಕ್ಕೆ ತುಂಬಾ ಖುಷಿಪಟ್ಟು ಅವನಿಗೆ ಹೊಸ ಸೈಕಲ್‌ನ್ನು ಗಿಫ್ಟ್ ಆಗಿ ಕೊಡ್ತಾರೆ.

ಈ ಕಥೆಯಿಂದ ಗೊತ್ತಾಗೋದು ಏನು ಅಂದ್ರೆ ನಾವು ಯಾವಾಗ್ಲೂ ಇತರರಿಗೆ ಸಹಾಯ ಮಾಡ್ಬೇಕು. ಇತರರಿಗೆ ಸಹಾಯ ಮಾಡಿದ್ರೆ ಅದೇ ನಮಗೆ ಮರಳಿ ಬರುತ್ತೆ ಅಲ್ವಾ?.

Most Read

error: Content is protected !!